ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಅದ್ದೂರಿಯಾಗಿ ಜರುಗಿದ ಪುರಾಣ ಮಂಗಲೋತ್ಸವ ಮತ್ತು ಜಂಬೂ ಸವಾರಿ.

Advertisement

ಬಡವರ ಬಾರಕೋಲು ಸುದ್ದಿ
ಮಸ್ಕಿ : ನವರಾತ್ರಿ ನಿಮಿತ್ತ ಭ್ರಮರಾಂಬ ದೇವಸ್ಥಾನದಲ್ಲಿ ನಡೆಯುತ್ತಿರುವ 54ನೇ ವರ್ಷದ ಮಹಾದೇವಿ ಪುರಾಣದ ಮಂಗಲೋತ್ಸವ ನಡೆಯಿತು.


ಬೆಳಿಗ್ಗೆ 8 ಗಂಟೆಗೆ ಗಂಗಾಸ್ಥಳದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದು 8.30ಕ್ಕೆ ದೇವಿಯನ್ನು ಹೊತ್ತ ಅಂಬಾರಿ ಮೆರವಣಿಗೆಯಲ್ಲಿ ಸಾವಿರ ಮಹಿಳೆಯರು ಕುಂಭ ಹೊತ್ತು ಭಾಗಿಯಾಗಿದ್ದರು.

ದೇವಿಯ ಉತ್ಸವ ಮೂರ್ತಿಯನ್ನು ಈ ಬಾರಿ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನದ 'ಲಕ್ಷ್ಮೀ' ಆನೆ ಹೊತ್ತುಕೊಂಡಿತ್ತು.

ಅಶೋಕ ವೃತ್ತದಲ್ಲಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಅಂಬಾರಿಗೆ ಪುಷ್ಪಾರ್ಪಣೆ ಮಾಡಿ ಚಾಲನೆ ನೀಡಿದರು.

https://youtu.be/judz_plvGHE?si=ZhUgmq4CmIoPOUHI
ಈ ಮೆರವಣಿಗೆಯಲ್ಲಿ
ಸ್ವಾಮಿ ಶಾರದೇಶಾನಂದಜಿ ಮಹಾರಾಜ ರಾಮಕೃಷ್ಣ ವಿವೇಕಾನಂದಾಶ್ರಮ ಹರಿಹರ,ಶಾಸಕ ಆರ್.ಬಸವನಗೌಡ ತುರುವಿಹಾಳ,ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ,
ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ,ತಹಶೀಲ್ದಾರ್‌ ಡಾ.ಮಲ್ಲಪ್ಪ ಕೆ ಯರಗೋಳ
ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ,ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಉಪಾಧ್ಯಕ್ಷರಾದ ಗೀತಾ ಶಿವರಾಜ,ರವಿಗೌಡ ಪೊಲೀಸ್ ಪಾಟೀಲ,ಬಸವನಗೌಡ ಪೊಲೀಸ್ ಪಾಟೀಲ,ಸರ್ಕಲ್ ಇನ್‌ಸ್ಪೆಕ್ಟರ್ ಬಾಲಚಂದ್ರ ಡಿ.ಲಕ್ಕಂ,ಪಿ.ಎಸ್.ಐ.ತಾರಬಾಯಿ,ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಅರ್ಚಕ ರಾದ ಸಿದ್ದಯ್ಯ ಹೆಸರೂರು ಹಿರೇಮಠ,ಸೇರಿದಂತೆ
ಪುರಸಭೆ ಸದಸ್ಯರು,ಅನೇಕ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಗಂಗಾಸ್ಥಳದಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಹಾಗೂ ಕಳಸಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ಅಶೋಕ ವೃತ್ತದಿಂದ ಆರಂಭವಾದ
ಜಂಬೂ ಸವಾರಿ ಹಾಗೂ ಪಲ್ಲಕ್ಕಿ ಮೆರವಣಿಗೆ ಅಗಸಿ,ಮುಖ್ಯ ಬಜಾರ,ದೈವದಕಟ್ಟೆ,ತೇರು ಬೀದಿ,ಕನಕವೃತ್ತದ ಮೂಲಕ ಸಾಗಿ ಭ್ರಮರಾಂಬಾ ದೇವಸ್ಥಾನಕ್ಕೆ ಆಗಮಿಸಿತ್ತು.ಸಂಡೂರಿನ ಚಂದ್ರಶೇಖರಯ್ಯ ಸ್ವಾಮಿಗಳ ವೀರಗಾಸೆ ನೃತ್ಯ,ಡೊಳ್ಳು ಕುಣಿತ,ನಂದಿ ಕೊಲು ಸರಿದಂತೆ ವಿವಿಧ ವಾದ್ಯಗಳು ಪಾಲ್ಗೊಂಡಿದ್ದವು. .
https://youtu.be/judz_plvGHE?si=ZhUgmq4CmIoPOUHI

ಅಭಿಷೇಕ:-

ಭ್ರಮರಾಂಬಾದೇವಿಗೆ ಗಂಗಾಸ್ಥಳದಿಂದ ನೂರಾರು ಮಹಿಳೆಯರು ಹೊತ್ತು ತಂದ ಜಲದಿಂದ ಅಭಿಷೇಕ ಮಾಡಲಾಯಿತು
ದೇವಿಗೆ ವಿವಿಧ ಧಾರ್ಮಿಕ ಪೂಜಾ
ಕಾರ್ಯಕ್ರಮಗಳು ನಡೆದವು.
ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ