ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಭೂತಲದಿನ್ನಿಯಲ್ಲಿ ಭರ್ಜರಿ ಸಾಮಾಜಿಕ ನಾಟಕ – “ಗಂಡು ಮೆಟ್ಟಿದ ನಾಡಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ”

Advertisement
 

ಯುಗಾದಿ ಪ್ರಯುಕ್ತ ಭೂತಲದಿನ್ನಿಯಲ್ಲಿ ಭರ್ಜರಿ ಸಾಮಾಜಿಕ ನಾಟಕ – “ಗಂಡು ಮೆಟ್ಟಿದ ನಾಡಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ” ಖ್ಯಾತ ರಂಗಭೂಮಿ ಕಲಾವಿದ ಶಿವು ಸಣ್ಣಗೌಡ್ರವರ ಆರನೇ ಕಲಾಕೃತಿ – ಒಂದೇ ದಿನದ ವಿಶೇಷ ಪ್ರದರ್ಶನಕ್ಕೆ ಸಿದ್ಧತೆ

ಸಿಂಧನೂರು

ಭೂತಲದಿನ್ನಿ ಯುಗಾದಿ ಹಬ್ಬದ ಸಂಭ್ರಮದ ಅಂಗವಾಗಿ ಭೂತಲದಿನ್ನಿಯಲ್ಲಿ ಅದ್ದೂರಿಯಾಗಿ ಸಾಮಾಜಿಕ ನಾಟಕ “ಗಂಡು ಮೆಟ್ಟಿದ ನಾಡಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ” ಪ್ರದರ್ಶನಗೊಳ್ಳಲಿದೆ. ಖ್ಯಾತ ರಂಗಭೂಮಿ ಕಲಾವಿದರಾದ ಶ್ರೀ ಶಿವರೆಡ್ಡಿ ಗೌಡ (ಶಿವು ಸಣ್ಣಗೌಡ್ರು) ಅವರ ಆರನೆಯ ಕಲಾಕೃತಿಯಾಗಿ ಈ ನಾಟಕ ರಂಗಭೂಮಿಗೆ ಬರುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಸಮಾಜಮುಖಿ ಸಂದೇಶ ನೀಡುವ ಉದ್ದೇಶ ಹೊಂದಿದೆ.

ಈ ನಾಟಕದಲ್ಲಿ ಕುಟುಂಬ, ಸಮಾಜ, ರೈತನ ಬದುಕು, ಪ್ರೀತಿ, ಸ್ನೇಹ, ನ್ಯಾಯ ಹಾಗೂ ಕ್ರಾಂತಿಯ ಭಾವನೆಗಳನ್ನು ಒಳಗೊಂಡ ಕಥಾಹಂದರವನ್ನು ಮೂಡಿಸಲಾಗಿದೆ. “ಗಂಡು ಮೆಟ್ಟಿದ ನಾಡಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಅರ್ಥಾರ್ಥ ರೈತನಾದರೆ ಉಪಕಾರಿ, ಸಿಡಿದೆದ್ದರೆ ಕ್ರಾಂತಿಕಾರಿ” ಎಂಬ ಸಂದೇಶವನ್ನು ಒಳಗೊಂಡ ಈ ನಾಟಕವು ರೌದ್ರಮಯ, ಕೌಟುಂಬಿಕ ಹಾಗೂ ಹಾಸ್ಯಭರಿತ ಸನ್ನಿವೇಶಗಳೊಂದಿಗೆ ಪ್ರೇಕ್ಷಕರ ಮನ ಗೆಲ್ಲುವಂತಿದೆ.



ಯುಗಾದಿ ಹಬ್ಬದ ಪ್ರಯುಕ್ತ ಇದೇ ತಿಂಗಳ ಮಾರ್ಚ್ 18 - 2026 ರಂದು ವಿಶೇಷವಾಗಿ ಒಂದೇ ಪ್ಪ್ರಯೋಗ ಈ ನಾಟಕ ಪ್ರದರ್ಶನಗೊಳ್ಳಲಿದ್ದು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುವಂತೆ ಬಸವರಾಜಗೌಡ ಮಿತ್ರ ಮಂಡಳಿ ಭೂತಲದಿನ್ನಿ ಮನವಿ ಮಾಡಿದೆ.

ಈ ಕುರಿತು ಮಾತನಾಡಿದ ಕವಿ ಹಾಗೂ ನಾಟಕಕಾರ ಶಿವು ಸಣ್ಣಗೌಡ್ರು, “ಇದು ನನ್ನ ಆರನೆಯ ಕಲಾಕೃತಿ. ಈ ನಾಟಕದ ಕಥೆ ಸಂಪೂರ್ಣವಾಗಿ ನನ್ನ ಕಲ್ಪನೆಯ ಮೇಲೆ ರಚಿತವಾಗಿದ್ದು, ಸಮಾಜದ ಹಲವು ಆಯಾಮಗಳನ್ನು ಸ್ಪರ್ಶಿಸುತ್ತದೆ. ರಂಗಭೂಮಿಯನ್ನು ಉಳಿಸಲು ಜನರ ಪ್ರೋತ್ಸಾಹ ಅತ್ಯಗತ್ಯ. ಆದ್ದರಿಂದ ಮಹಿಳೆಯರು, ಯುವಕರು, ಹಿರಿಯರು ಎಲ್ಲರೂ ಬಂದು ಈ ನಾಟಕವನ್ನು ನೋಡಿ ರಂಗಭೂಮಿ ಕಲಾವಿದರಿಗೆ ಬೆಂಬಲ ನೀಡಬೇಕು” ಎಂದು ವಿನಂತಿಸಿದರು.



 

ನಾಟಕದಲ್ಲಿ ಮಹೇಶಪ್ಪ ಪಾತ್ರವನ್ನು ಅಯ್ಯಪ್ಪ, ಬ್ರಹ್ಮಾನಂದ ಪಾತ್ರವನ್ನು ಚಂದ್ರಾಮಪ್ಪ ಬಾಗಲವಾಡ, ವಿಷ್ಣು ಪಾತ್ರವನ್ನು ಎಸ್.ಎಸ್. ಜೀನೂರ, ಉಗ್ರಪ್ಪ ಪಾತ್ರವನ್ನು ಚನ್ನು ಜಂಗ್ರಹಳ್ಳಿ, ರಾಣಾ. ಪಾತ್ರವನ್ನು ಬಸವರಾಜ್ ಹಡಪದ್, ಯಕ್ಕರಾಜ ಪಾತ್ರವನ್ನು ಶಿವರೆಡ್ಡಿ ಕಿಡದೂರ್ (ಶಿವು ಸಣ್ಣಗೌಡ್ರು), ಕಮಲಾಕ್ಷ ಪಾತ್ರವನ್ನು ಶರಣಯ್ಯ ಸ್ವಾಮಿ ಮಠಪತಿ ಹಾಗೂ ವಿರೂಪಾಕ್ಷ ಪಾತ್ರವನ್ನು ತಬೀರ್ ಟಿ. ಅವರು ನಿರ್ವಹಿಸಲಿದ್ದಾರೆ.

ಸ್ತ್ರೀ ಪಾತ್ರಗಳಲ್ಲಿ ಗಿರಿಜಾ, ಗೀತಾ (ರತ್ನ ಬಾದಾಮಿ), ಸಂಗೀತ (ಶೋಭಾ ಬಾದಾಮಿ) ಮತ್ತು ಕಾಮಾಕ್ಷಿ (ಸುವರ್ಣ ಬಾದಾಮಿ) ಅವರು ಅಭಿನಯಿಸಲಿದ್ದಾರೆ.

ಸಂಗೀತ ಬಳಗವನ್ನು ಕ್ಯಾಂಪ್ ಹನುಮೇಶ್ ಮತ್ತು ಚಿನ್ನು ತಾವರಗೇರಾ ತಂಡ ನಿರ್ವಹಿಸಲಿದ್ದು, ಮೇಕಪ್ ಕಾರ್ಯವನ್ನು ಶಶಿ ಗಂಗೂರು ಮಾಡಲಿದ್ದಾರೆ. ರಂಗಸಜ್ಜಿಕೆಯನ್ನು ಕೂಕನಪಳ್ಳಿ ಸುಂಗಯ್ಯ ಸ್ವಾಮಿ ನಿರ್ವಹಿಸಲಿದ್ದು, ಸೀನ್ಸ್ ನಿರ್ದೇಶನವನ್ನು ಶಿವು ಸಣ್ಣಗೌಡ್ರು ವಹಿಸಿಕೊಂಡಿದ್ದಾರೆ. ಕಥಾ ಸಂಚಾಲಕರಾಗಿ ಗುಂಡಪ್ಪ ಎಂ. ಪಗಡದಿನ್ನಿ, ಕಾರ್ಯಕ್ರಮ ನಿರ್ವಹಣೆಯನ್ನು ಅವಿನಾಶ್ ಅಂಗಡಿ ನೋಡಿಕೊಳ್ಳಲಿದ್ದಾರೆ.

ಒಟ್ಟಿನಲ್ಲಿ ಸಮಾಜದ ವಿವಿಧ ಮುಖಗಳನ್ನು ತೆರೆದಿಡುವ ಈ ನಾಟಕವು ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಚಿಂತನೆಗೆ ದಾರಿ ಮಾಡಿಕೊಡುವ ನಿರೀಕ್ಷೆಯಿದೆ. ಹೀಗಾಗಿ ಯುಗಾದಿ ಸಂಭ್ರಮದಲ್ಲಿ ಈ ವಿಶೇಷ ನಾಟಕವನ್ನು ನೋಡಲು ಎಲ್ಲರೂ ಆಗಮಿಸಿ ರಂಗಭೂಮಿಗೆ ಬೆಂಬಲ ನೀಡಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಕೆಲ ಕಪ್ಪು ಕುರಿಗಳಿಂದ ಪೊಲೀಸ್ ಇಲಾಖೆಗೆ ಕಳಂಕ!ತುಂಗಭದ್ರಾ ನೂತನ ಗೇಟ್‌ಗಳ ಉದ್ಘಾಟನೆ: ಆಂಧ್ರ-ತೆಲಂಗಾಣ ಮುಖ್ಯಮಂತ್ರಿಗಳಿಗೆ ಖುದ್ದು ಆಹ್ವಾನ ನೀಡಲು ಶಾಸಕರ ನಿಯೋಗ ರಚನೆಕುಡಿಯುವ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳ ಮಾಹಿತಿ ನೀಡಿ DC ಪೂವಿತಾ ಎಸ್. ಸೂಚನೆಮ.ಕ.ಸಂಸ್ಥೆಗಳ ಪರಿಶೀಲನೆ ನಡೆಸಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಸತ್ಯ ನಾರಾಯಣ ಶೆಟ್ಟಿನವಲಿ ಸಮಾನಾಂತರ ಜಲಾಶಯಕ್ಕೆ ಡಿಕೆಶಿ ಗ್ರೀನ್ ಸಿಗ್ನಲ್..! ಬಸನಗೌಡ ಬಾದರ್ಲಿರಾಯಚೂರಿನಲ್ಲಿ ಲೋಕಾಯುಕ್ತ ದಿಡೀರ್ ದಾಳಿ: DDPI ಕಚೇರಿಯಲ್ಲಿ ಪರಿಶೀಲನೆ12 ವರ್ಷದ ಬಾಲಕನನ್ನು ಕಸಿದ ರೇಬೀಸ್: ಆರೋಗ್ಯ ಇಲಾಖೆಗೆ ನಾಚಿಕೆ ಆಗಬೇಕು!ಮೊಹರಂ ಹಬ್ಬ: ಜಿಲ್ಲೆಯ 29 ಗ್ರಾಮಗಳಲ್ಲಿ ಸಾರ್ವಜನಿಕ ಆಚರಣೆ, ಮೆರವಣಿಗೆ ನಿಷೇಧ‘ಕರ್ತವ್ಯ’ ಎಐ ವ್ಯವಸ್ಥೆಗೆ ಭಾರಿ ಸ್ಪಂದನೆ: ವಾರದಲ್ಲೇ 55 ಸಾವಿರಕ್ಕೂ ಹೆಚ್ಚು ಹೊಸ ನೋಂದಣಿರಕ್ತದಾನದ ಮಹತ್ವ ತಿಳಿಸುವ ಕಾರ್ಯವಾಗಲಿ: ಎಸ್ಪಿ ಅರುಣಾಂಗ್ಷು ಗಿರಿಮಾನ್ಯ ಜಿಲ್ಲಾಧಿಕಾರಿಗಳೇ... ಅಧಿಕಾರಿಗಳ ವರದಿಗಿಂತ ರೋಗಿಗಳ ಕಣ್ಣೀರು ಹೆಚ್ಚು ಸತ್ಯ ಹೇಳುತ್ತದೆ!ಮಹತ್ವಾಕಾಂಕ್ಷಿ ಜಿಲ್ಲೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಗ್ರಾ.ಪಂ.ಲಕ್ಷಾಂತರ ರೂಪಾಯಿ ದುಬ್ಬಳಕ್ಕೆ ಆರೋಪ ಸಮಗ್ರ ತನಿಖೆಗೆ ದಲಿತ ಸಂಘಟನೆ ಆಗ್ರಹ ಮನೆಯೊಳಗೇ ಮರಣದ ನರ್ತನ!"ರೆಫರಲ್ ರಾಜಕಾರಣಕ್ಕೆ ಬಲಿಯಾಗುತ್ತಿವೆಯೇ ನವಜಾತ ಶಿಶುಗಳ ಜೀವಗಳು?"