ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಅಪ್ರಾಪ್ತೆಯ ಗರ್ಭಪಾತ ಪ್ರಕರಣ – ಪ್ರಾಂಶುಪಾಲ, ವಾರ್ಡನ್ ಅಮಾನತು

Advertisement
🛑 ಬ್ರೇಕಿಂಗ್ ನ್ಯೂಸ್

ಕೊಪ್ಪಳ. BB NEWS KANNADA

ಫೆಬ್ರುವರಿ 27. ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜುನಲ್ಲಿ ಅಪ್ರಾಪ್ತ ಬಾಲಕಿಗೆ ಗರ್ಭಪಾತ ನಡೆದಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಹನುಮೇಶ್ ಹಾಗೂ ನಿಲಯ ಪಾಲಕಿ ಭಾರತಿ ಅವರನ್ನು ಅಮಾನತು ಮಾಡಲಾಗಿದೆ. ಈ ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

https://www.instagram.com/reel/DVQA7AHkkGO/?igsh=MTJ3N3NtbnZqOGs3bQ==

ಕರ್ತವ್ಯಲೋಪ–ಬೇಜವಾಬ್ದಾರಿ: ನಾಗರೀಕ ಸೇವಾ ನಿಯಮಗಳಡಿ ಕ್ರಮ

ಪ್ರಾಥಮಿಕ ತನಿಖೆಯಲ್ಲಿ ಕರ್ತವ್ಯ ಲೋಪ, ಬೇಜವಾಬ್ದಾರಿ ಮತ್ತು ಗಂಭೀರ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ರಾಜ್ಯ ನಾಗರೀಕ ಸೇವಾ ನಿಯಮಗಳು–1957ರ ಕಾಯ್ದೆಯಡಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇಲಾಖಾ ವಿಚಾರಣೆ ಮುಂದುವರಿಯಲಿದೆ.

“ಋತುಸ್ರಾವ” ಎಂದು ಸುಳ್ಳು ವರದಿ?

ಫೆಬ್ರವರಿ 19ರ ರಾತ್ರಿ ಅಪ್ರಾಪ್ತ ಬಾಲಕಿಗೆ ಗರ್ಭಪಾತವಾದ ಬಗ್ಗೆ ಜಿಲ್ಲಾಧಿಕಾರಿ ಮಟ್ಟದ ವಿಚಾರಣೆ ನಡೆಯುವ ವೇಳೆ, ಪ್ರಾಂಶುಪಾಲರು ಸತ್ಯವನ್ನು ಮುಚ್ಚಿಟ್ಟು ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದಾರೆಯೆಂಬ ಗಂಭೀರ ಆರೋಪ ಎದುರಾಗಿದೆ.

ವಸತಿ ಶಾಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಹೇಳಿಕೆ

ಬಾಲಕಿಗೆ ಋತುಸ್ರಾವವಾಗಿದೆ ಎಂದು ವರದಿ.

ಆಸ್ಪತ್ರೆಗೆ ಕರೆದೊಯ್ಯುವಾಗ ಪಾಲಕರು ಬಂದು ಮನೆಗೆ ಕರೆದುಕೊಂಡು ಹೋದರು ಎಂದು ಮೇಲಧಿಕಾರಿಗಳಿಗೆ ಮಾಹಿತಿ.

ಈ ಹೇಳಿಕೆಗಳು ಬಳಿಕ ಸಲ್ಲಿಸಿದ ವರದಿಗಳೊಂದಿಗೆ ಹೊಂದಿಕೆಯಾಗದ ಹಿನ್ನೆಲೆ, “ಸತ್ಯ ಮರೆಮಾಚಲು ಪ್ರಯತ್ನ” ಎಂಬ ಅಭಿಪ್ರಾಯವನ್ನು ಜಿಲ್ಲಾ ಅಧಿಕಾರಿಗಳು ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ.

ಹಿಂದಿನ ಆರೋಪಗಳೂ ಬೆಳಕಿಗೆ

ಈ ಸಂಸ್ಥೆಯ ಆಡಳಿತ ಕ್ರಮಗಳ ಬಗ್ಗೆ ಈ ಹಿಂದೆಯೇ ಗಂಭೀರ ಪ್ರಶ್ನೆಗಳು ಎದ್ದಿದ್ದವು.

  1. ಸಂಜೆ 5 ಗಂಟೆಗೂ ಮುನ್ನ ಪ್ರಾಂಶುಪಾಲರು ಕ್ಯಾಂಪಸ್ ತೊರೆಯುತ್ತಾರೆ ಎಂಬ ದೂರು.

  2. ಪ್ರಮುಖ ಜಯಂತಿ–ಕಾರ್ಯಕ್ರಮಗಳ ನಿರ್ಲಕ್ಷ್ಯ.

  3. ಕಳಪೆ ಧಾನ್ಯ ಬಳಸಿ ಅನ್ನ ತಯಾರಿ.

  4. ಬಳಕೆ ನೀರಿನ ಕೊರತೆ.

  5. ವಿದ್ಯಾರ್ಥಿನಿಯರ ಭದ್ರತೆಯಲ್ಲಿ ಲೋಪ.

  6. ಕಿಟ್‌ ವಿತರಣೆ ವಿಳಂಬ, ಹಾಸಿಗೆಗಳ ಅಕ್ರಮ ಸಾಗಣೆ ಆರೋಪ.


ಈ ಎಲ್ಲಾ ವಿಷಯಗಳ ಕುರಿತು ಸ್ಥಳೀಯ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದರೂ, ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣದ ತಿದ್ದುಪಡಿ ಕ್ರಮ ಕೈಗೊಳ್ಳಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

“ಮನೆ ಸುಟ್ಟ ಮೇಲೆ ಬಾವಿ ತೋಡಿದಂತೆ..!”

ಗಂಭೀರ ಘಟನೆ ಹೊರಬಂದ ನಂತರವೇ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವಿದ್ಯಾರ್ಥಿನಿಯರ ಸುರಕ್ಷತೆ–ಆರೋಗ್ಯಕ್ಕೆ ಸಂಬಂಧಿಸಿದ ಸಂಸ್ಥೆಯಲ್ಲಿ ಇಂತಹ ನಿರ್ಲಕ್ಷ್ಯ ನಡೆದುಬಂದಿದ್ದರೆ, ಮೇಲ್ವಿಚಾರಣಾ ವ್ಯವಸ್ಥೆ ಎಲ್ಲಿತ್ತು? ಎಂಬ ಪ್ರಶ್ನೆ ತಲೆದೋರಿದೆ.

ಮುಂದೇನು?

  1. ಸಂಪೂರ್ಣ ಇಲಾಖಾ ವಿಚಾರಣೆ

  2. ವೈದ್ಯಕೀಯ–ಕಾನೂನು ಆಯಾಮಗಳ ಪರಿಶೀಲನೆ

  3. ಕ್ಯಾಂಪಸ್‌ ಸುರಕ್ಷತಾ ಮಾನದಂಡಗಳ ಮರುಪರಿಶೀಲನೆ

  4. ವಿದ್ಯಾರ್ಥಿನಿಯರ ಆರೋಗ್ಯ–ಭದ್ರತೆಗೆ ವಿಶೇಷ ತಂಡ ನಿಯೋಜನೆ


ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಸಂಬಂಧಿಸಿದ ಸಂಸ್ಥೆಯಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳು ಕೈಗೊಳ್ಳಲಾಗುತ್ತವೆಯೇ? ಅಥವಾ ಇದು ಕೇವಲ ತಾತ್ಕಾಲಿಕ ಅಮಾನತು ಕ್ರಮವಾಗಿಯೇ ಉಳಿಯುತ್ತದೆಯೇ? ಎಂಬುದನ್ನು ಮುಂದಿನ ತನಿಖೆ ಸ್ಪಷ್ಟಪಡಿಸಲಿದೆ.

(ಗಮನಿಸಿ: ಪ್ರಕರಣದಲ್ಲಿ ಅಪ್ರಾಪ್ತೆಯ ಗುರುತು ಬಹಿರಂಗಪಡಿಸದೇ, ಕಾನೂನು ನಿಯಮಗಳನ್ನು ಪಾಲಿಸುವುದು ಮಾಧ್ಯಮದ ಜವಾಬ್ದಾರಿಯಾಗಿದೆ.)
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್