ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಅಮರ ಶ್ರೀ ಆಲದ ಮರ ಒಂದು ವರ್ಷ ಪೂರ್ಣ ಶರಣೇಗೌಡ ಹೆಡಗಿನಾಳ

Advertisement
ಮೇ 26.ಸಿಂಧನೂರು ನಗರದ ನೀರಾವರಿ ಇಲಾಖೆ ಆವರಣದಲ್ಲಿ ಇಂದು ವನಸಿರಿ ಫೌಂಡೇಶನ್(ರಿ)ರಾಜ್ಯ ಘಟಕ ರಾಯಚೂರು ವತಿಯಿಂದ ಅಮರ ಶ್ರೀ ಆಲದ ಮರದ ವಾರ್ಷಿಕೋತ್ಸವ ಹಾಗೂ ಹುಟ್ಟು ಹಬ್ಬದ ಸಮಾರಂಭವನ್ನು ಪೂಜ್ಯ ಶ್ರೀ ಸದಾನಂದ ಶರಣರು ಹಾಗೂ ಅಮರೇಶ ಸ್ವಾಮಿ ಶರಣರು ಗೌಡನಬಾವಿ ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು.

https://youtu.be/oDM2lPLurVY

ವನಸಿರಿ ಫೌಂಡೇಶನ್ ರಾಜ್ಯ ಕಾರ್ಯದರ್ಶಿ ಶರಣೇಗೌಡ ಹಡಗಿನಾಳ ಅವರು ಮಾತನಾಡಿ ಪ್ರಕೃತಿಮಾತೆಯನ್ನು ನಾವು ಉಳಿಸಿ ಬೆಳಸಿದರೆ ಪ್ರಕೃತಿ ನಮ್ಮನ್ನು ಉಳಿಸುತ್ತಾಳೆ,ಗಿಡಮರಗಳಿಗೂ ಜೀವವಿದೆ ಎಂಬುದನ್ನು ನಮ್ಮ ವನಸಿರಿ ತಂಡ ಈ ಆಲದ ಮರವನ್ನು ಪೋಷಣೆ ಮಾಡುವ ಮೂಲಕ ತೋರಿಸಿದ್ದಾರೆ.ಇಂದಿಗೆ ಈ ಮರ ನೆಟ್ಟು ಒಂದು ವರ್ಷ ಕಳೆದಿದೆ ಅದರ ಸವಿನೆನಪಿಗಾಗಿ ವಾರ್ಷಿಕೋತ್ಸವ ಮಾಡುತ್ತಿದ್ದೇವೆ.ನಮ್ಮ ಜೀವನದಲ್ಲಿ ಅತಿಮುಖ್ಯ, ನಾವು ಉಸಿರಾಡಬೇಕಾದರೆ ಗಾಳಿ ಅತಿಅವಶ್ಯಕ, ಗಿಡಮರಗಳನ್ನು ಬೆಳಸುವುದರಿಂದ ಮಾತ್ರ ನಾವು ಶುದ್ಧವಾದ ಗಾಳಿ ಪಡೆಯಲು ಸಾದ್ಯ ಆದ್ದರಿಂದ ಪ್ರಕೃತಿಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ವನಸಿರಿ ಫೌಂಡೇಶನ್ ಜೊತೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಂಗಾರಿಕ್ಯಾಂಪ್ ಪರಮ ಪೂಜ್ಯ ಶ್ರೀ ಸದಾನಂದ ಶರಣರು ಮಾತನಾಡಿ ಈ ಜಗತ್ತಿನಲ್ಲಿ ಹುಟ್ಟು ಹಬ್ಬಗಳನ್ನು ಮನುಷ್ಯರಾದ ನಾವುಗಳು ಆಚರಿಸಿಕೊಳ್ಳುವುದೇ ಹೊರತು ಬೇರೇ ಯಾರೂ ಆಚರಿಸುಕೊಳ್ಳುವುದಿಲ್ಲ ಇಂತಹ ಸಂದರ್ಭದಲ್ಲಿ ನಮ್ಮ ಸಿಂಧನೂರು ನಗರದಲ್ಲಿ 30ವರ್ಷದ ಹಿಂದಿನ ಬುಡಸಮೇತ ಕಿತ್ತು ಹಾಕಿದ ಆಲದ ಮರವನ್ನು ನೆಟ್ಟು ತನ್ನ ಮಗುವಿನಂತೆ ಪೋಷಿಸಿ ಅದಕ್ಕೆ ಪರಮ ಪೂಜ್ಯರ ಆರ್ಶೀವಾದ ಪಡೆಸಿ ಅದಕ್ಕೊಂದು ನಾಮಕರಣ ಮಾಡಿ ಇಂದು ಆ ಆಲದಮರಕ್ಕೆ ಹುಟ್ಟು ಹಬ್ಬವನ್ನು ಕೂಡಾ ಆಚರಣೆ ಮಾಡಲು ವನಸಿರಿ ಅಮರೇಗೌಡ ಮಲ್ಲಾಪೂರ ಅವರ ಪರಿಶ್ರಮವೇ ಕಾರಣ ಅವರಿಗೆ ಗುರುವಿನ ಆರ್ಶೀವಾದ ಇದ್ದದ್ದರಿಂದಲೇ ಈ ಕಾರ್ಯವನ್ನು ಕೈಗೊಳ್ಳಲು ಸಹಾಯವಾಗಿದೆ ಆ ಗುರುವಿನ ಮತ್ತು ಪ್ರಕೃತಿ ಮಾತೆಯ ಆರ್ಶೀವಾದ ಸದಾಕಾಲವೂ ಇರಲಿ ಈ ಕಾರ್ಯ ಹೀಗೇ ಮುಂದುವರೆಯಲಿ ಎಂದು ಆರ್ಶೀವದಿಸಿದರು.

ಬೆಳಗ್ಗೆ ಆಲದ ಮರಕ್ಕೆ ಮಹಿಳಾ ಘಟಕದ ವತಿಯಿಂದ ರಂಗೋಲಿ ಹಾಗೂ ಹೂವಿನ ಮೂಲಕ ಅಲಂಕಾರ ಹಾಗೂ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಪೂಜ್ಯರಿಂದ ಆಲದ ಮರಕ್ಕೆ ವಿಶೇಷ ಪೂಜೆ ಮಾಡಲಾಯಿತು.ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಬ್ರಮಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಪರಿಸರ ಪ್ರೇಮಿಗಳಿಗೆ ಬಾಳೆಹಣ್ಣುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಂಗಾರಿ ಕ್ಯಾಂಪ್ ಸದಾನಂದ ಶರಣರು,ವನಸಿರಿ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ಶಿವನಗೌಡ ಗೊರೆಬಾಳ, ಶಾರದ ಮಹಿಳಾ ಸಂಸ್ಥೆಯ ಅದ್ಯಕ್ಷರು ವಿಜಯಕುಮಾರ,ಶ್ರೀಮತಿ ದ್ರಾಕ್ಷಾಯಣಿ ಮಾಲಿ ಪಾಟೀಲ, ರಾಜ್ಯ ಕಾರ್ಯದರ್ಶಿ ಶರಣೇಗೌಡ ಹಡಗಿನಾಳ, ತಾಲೂಕ ಅದ್ಯಕ್ಷ ರಮೇಶ ಕುನ್ನಟಗಿ, ಜೀವಸ್ಪಂದನ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ,ವನಸಿರಿ ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷೆ ಸಂಗೀತ ಸಾರಂಗಮಠ,ಮಮತಾ ಹಿರೇಮಠ, ಓಂ ಶಾಂತಿ ಅಮ್ಮನವರು,ಮಾಜಿ ನಗರಸಭೆಯ ಅದ್ಯಕ್ಷರು ನದೀಮ್ ಮುಲ್ಲಾ,ವೀರೇಶ ವಕೀಲರು,ಸೈನಿಕರಾದ ಸುರೇಶ್ , ಹಾಗೂ ಸನ್ ರೈಸ್ ಕಾಲೇಜು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ವನಸಿರಿ ಫೌಂಡೇಶನ್ ಸದಸ್ಯರಾದ ರಾಜುಬಳಗಾನೂರ, ಮುದಿಯಪ್ಪ,ಚನ್ನಪ್ಪ ಜಾಲತಾಣ ಅಧ್ಯಕ್ಷ,ರಾಜು ಮಲ್ಲಾಪುರ,ವೆಂಕಟರಡ್ಡಿ, ನಾಗರಾಜಗೌಡ,ಮುತ್ತು ಪಾಟೀಲ ಬೂತಲದಿನ್ನಿ,ಸರ್ವ ಸದಸ್ಯರು,ಪರಿಸರ ಪ್ರೇಮಿಗಳು,ಪತ್ರಿಕಾ ಮಿತ್ರರು ಭಾಗವಹಿಸಿ ಯಶಸ್ವಿಗೊಳಿಸಿದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್