ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ: ಹೆಮ್ಮೆಯಿಂದ ಮತದಾನ ಮಾಡಿ

ರಾಯಚೂರು,ಏ.28(ಕ.ವಾ):- 18 ವರ್ಷ ತುಂಬಿ ಎಲ್ಲಾ ವಯಸ್ಕ ಪ್ರೌಡ ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಸಾಮಾನ್ಯವಾಗಿ ಚುನಾವಣೆ ಗುಪ್ತ ಮತದಾನ ಪದ್ಧತಿ ಮೂಲಕ ನಡೆಯುವಂತಹದ್ದು, ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ರೂಪಿಸಿರುವ ವ್ಯವಸ್ಥೆ ಇದಾಗಿದೆ. ಇಂತಹ ಅತ್ಯುತಮ ವ್ಯವಸ್ಥೆಯಲ್ಲಿ ಭಾರತಿಯ ಪ್ರಜೆಗಳಾದ ನಾವು ಪ್ರಭುದ್ಧತೆಯಿಂದ ಅಮೂಲ್ಯವಾದ ಮತವನ್ನು ಮೇ 10 ರಂದು ಗ್ರಾಮದ ಎಲ್ಲಾರೂ ತಪ್ಪದೇ ಮತ ಚಲಾಯಿಸಿ ಎಂದು ಮಾನವಿ ತಾಲ್ಲೂಕು ಪಂಚಾಯತಿ ಐಇಸಿ ಸಂಯೋಜಕ ಈರೇಶ ಅವರು ಹೇಳಿದರು.

ಅದೇ ರೀತಿಯಾಗಿ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಸಂಗಾಪೂರು ಗ್ರಾಮ ಪಂಚಾಯತಿಯ ನಸ್ಲಾಪೂರು ಗ್ರಾಮದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸ್ವಿಪ್ ಚಟುವಟಿಕೆಯ ಅಂಗವಾಗಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆರೆ ಕೆಲಸ ನಿರ್ವಹಿಸುವ ಕೂಲಿಕಾರರಿಗೆ, ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆ ಕುರಿತು ಮತನಾಡಿದರು.

ಶತ ಪ್ರತಿಶತ ಮತದಾನ ರಾಯಚೂರು ಜಿಲ್ಲೆಯ ವಾಗ್ದಾನವನ್ನು ಯಶಸ್ವಿಯಾಗಿ ಪೂರೈಸೋಣ ಎಂದು ತಿಳಿಸಿ ಮತದಾನದ ಪ್ರತಿಜ್ಞೆವಿಧಿಯನ್ನು ಭೋದಿಸಿದರು.

ಏಪ್ರಿಲ್ 1 ರಿಂದ ನರೇಗಾ ಕೂಲಿ ಮೊತ್ತವು 309 ರಿಂದ 316 ಕ್ಕೆ ಹೆಚ್ಚಿಸಲಾಗಿದೆ. ಮೇಟ್ ಗಳು ಎನ್.ಎಮ್.ಎಮ್.ಎಸ್ ಆ್ಯಪ್ ಮೂಲಕ ಪ್ರತಿದಿನದ ಹಾಜರಾತಿಯನ್ನು ಪಡೆಯಬೇಕು. ಯೋಜನೆಯಡಿ ಸಿಗುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆಯಲು ಮಾಹಿತಿ ತಿಳಿಸಲಾಯಿತು.

ಕೂಲಿ ಕಾರ್ಮಿಕರಿಗೆ ಉಚಿತವಾಗಿ ಬಿಪಿ.ಶುಗಾರ್ ಹಾಗೂ ಹೀಮಾಗ್ಲೋಬಿನ್,ರಕ್ತ ಪರೀಕ್ಷೆ ಚೆಕ್ ಮಾಡಿ,ಅವಶ್ಯಕವಿರುವ ಕೂಲಿ ಕಾರ್ಮಿಕರಿಗೆ ಸ್ದಳದಲ್ಲಿ ಮಾತ್ರೆಗಳನ್ನು ನೀಡಲಾಯಿತು.ಹಾಗೂ ಇಬ್ಬರಿಗೆ ಕಣ್ಣಿನ ತೊಂದರೆ ಇರುವ ಕಾರಣ ಉಲ್ಲೇಖಿಸಲಾಯಿತು. ಚಂದ್ರಶೇಖರಯ್ಯ ಸೋಪಿಮಠ ಎಸ್,ಬಿ,ಎಯ್ ಬ್ಯಾಂಕ್ ನ ಸಾಕ್ಷರತ ಸಲಹೆಗಾರರು ಬ್ಯಾಂಕ್ ನ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಆಧಿಕಾರಿಗಳಾದ ಶ್ರೀಕಾಂತ ಶಿವಪುರೆ, ಸುಭಾನ್ ಕೆಎಚಪ್ಟಿಯ ಮರಿಲಿಂಗಣ್ಣ, ಬಿಎಪ್ಟಿ ರಾಯಪ್ಪ, ಗ್ರಾಮ ಪಂಚಾಯತಿಯ ಸಿಬ್ಬಂದಿಗಳು, ಮೇಟಿಗಳು ಮತ್ತು ಕೂಲಿಕಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
 ಸಿಂಧನೂರಿನ ಯುವಕ ಕಾಣೆಯಾದ ಪ್ರಕರಣ: ಪೋಷಕರ ಕಣ್ಣೀರಿನ ಮನವಿಸುಳ್ಳು ದೂರುಗಳಿಗೆ ಕಡಿವಾಣ: 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್ಭ್ರೂಣಲಿಂಗ ಪತ್ತೆ–ಹತ್ಯೆ ಪ್ರಕರಣ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಜೈಲು ಪಾಲು“50 ವರ್ಷಗಳ ಬದುಕಿಗೆ 15 ದಿನಗಳ ಗಡುವು: ಗಾಂಧಿನಗರದ 80 ಬಡ ಕುಟುಂಬಗಳ ಮೇಲೆ ಜೆಸಿಬಿ ನೆರಳು!”ಪೊಲೀಸ್ ಪೇದೆ ಮದುವೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ – ಮಾನವೀಯತೆಗೆ ಮಾದರಿ ಘಟನೆನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತ!ಬರುವ ದಿನಗಳು ಅಶಾಂತಿ ಸೂಚನೆ – ಅನ್ನ ನೀರಿಗೆ ಆಹಾಕಾರ: ಕೋಡಿಮಠ ಸ್ವಾಮೀಜಿ ಭವಿಷ್ಯಚಲಿಸುತ್ತಿದ್ದ ಬಸ್ ಏಕಾಏಕಿ ಜಮೀನಿಗೆ ನುಗ್ಗಿದ ಘಟನೆ – ನೂರಕ್ಕೂ ಹೆಚ್ಚು ಪ್ರಯಾಣಿಕರು ಪಾರು!ಕಲಮಂಗಿ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ – ವಿದ್ಯಾರ್ಥಿಗಳ ಭರ್ಜರಿ ಸಾಧನೆ“ಬಿಸಿಲಿನ ಅಬ್ಬರ: ಕರ್ನಾಟಕಲ್ಲಿ ಲಾಕ್‌ಡೌನ್ ಬರುತ್ತಾ..?”625ಕ್ಕೆ 625: ರಾಯಚೂರು ಸುಖದೇವ್ ಸಾಧನೆಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ80 ಅಡಿ ಕೆಳಗೆ ನೀರು: ಪೈದೊಡ್ಡಿ ವೃದ್ಧನ ಗೋಳು ಕೇಳುವರು ಯಾರು “ಪುರಾಣದ ಬಸವಣ್ಣ ಅಲ್ಲ — ಸಮಾಜ ಬದಲಿಸಿದ ಮನುಷ್ಯ ಬಸವಣ್ಣ”