ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಏನಿದು ಅಧಿಕ ಶ್ರಾವಣ ಮಾಸ....? ತಪ್ಪದೇ ಓದಿ

Advertisement
ಜೂಲೈ 12.‌ಸ್ನೇಹಿತರೆ, ಇದೇ 18ನೇಯ ತಾರೀಕು ಮಂಗಳವಾರದಂದು ಪುಷ್ಯನಕ್ಷತ್ರ ಹರ್ಷಿಣಿ ಯೋಗದಲ್ಲಿ ಅಧಿಕ ಶ್ರಾವಣ ಪ್ರಾರಂಭವಾಗುತ್ತದೆ.. ಶ್ರಾವಣ ಅಧಿಕ ಮಾಸವು ವಿಶೇಷವಾದ ಮಾಸಗಳಲ್ಲಿ ಒಂದಾಗಿದೆ. ಈ ಮಾಸವನ್ನು ಮಲಮಾಸ, ಕ್ಷಯಮಾಸ, ಪುರುಷೋತ್ತಮ ಮಾಸವೆಂದು ಕೂಡ ಕರೆಯಲಾಗುತ್ತದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಮಾತ್ರ ಅಧಿಕ ಮಾಸ ಬರುತ್ತದೆ..ಈ ಮಾಸದಲ್ಲಿ ನಿಜ ಶ್ರಾವಣದಲ್ಲಿದ್ದಂತೆ ಯಾವುದೇ ಹಬ್ಬಗಳು ಇರುವುದಿಲ್ಲ. ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಬರಲುಕಾರಣ.

ಎರಡು ವರ್ಷಗಳ ನಡುವೆ ಸುಮಾರು 11 ದಿನಗಳ ಅಂತರವಿದೆ. ಭಾರತೀಯ ಹಿಂದೂ ಗಣನಾ ಪದ್ಧತಿಯ ಪ್ರಕಾರ, ಪ್ರತ್ಯೇಕವಾಗಿ ಸೂರ್ಯ ವರ್ಷ 365 ದಿನ ಮತ್ತು 6 ಗಂಟೆಯಾಗಿರುತ್ತದೆ. ಅದೇ ಚಂದ್ರ ವರ್ಷ 354 ದಿನ ಎಂದು ಪರಿಗಣಿಸಲಾಗಿದೆ. ಇವೆರಡು ವರ್ಷಗಳ ಮಧ್ಯೆ 11 ದಿನಗಳ ಅಂತರ ಭಶ್ರ ಇರುತ್ತದೆ. ಆದ್ದರಿಂದ ಪ್ರತಿ 3 ವರ್ಷದಲ್ಲಿ ಒಂದು ಮಾಸಕ್ಕೆ ಸಮನಾಗುತ್ತದೆ.

ಈ ಕಾರಣದಿಂದ ಇದನ್ನು ಅಧಿಕ ಮಾಸವೆಂದುಕರೆಯಲಾಗುತ್ತದೆ. ಈ ಮಾಸದಲ್ಲಿ ಹಿಂದೂ ಧರ್ಮದ ಪವಿತ್ರ ಆಚರಣೆಗಳಾದ ನಾಮಕರಣ, ಯಜ್ಞೋಪವೀತ, ಮದುವೆ, ಗ್ರಹ ಪ್ರವೇಶ ಮತ್ತು ಹೊಸ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದನ್ನು ಮಾಡುವುದಿಲ್ಲ ..

ಪುರುಷೋತ್ತಮ ಮಾಸ ಕ್ಷಯಮಾಸ, ಮಲಮಾಸ.. ಏಕೆಂದರೆ ಮಾಸವು ಸಂಕ್ರಾಂತಿ ರಹಿತವಾದ ಮಾಸ...ಅಂದರೆ ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರತಿತಿಂಗಳು ಸಂಚಾರ ಮಾಡಿದಾಗ ಆಯಾ ರಾಶಿಯ ಸಂಕ್ರಾಂತಿ ಇರುತ್ತದೆ.. ಉದಾಹರಣೆಗೆ, ಸೂರ್ಯ ಮೇಷರಾಶಿಗೆ ಹೋದಾಗ ಮೇಷ ಸಂಕ್ರಾಂತಿ ಅಧಿಕಮಾಸದಲ್ಲಿ ಸೂರ್ಯ ಯಾವುದೇ ರಾಶಿಗೆ ಪ್ರವೇಶಿಸದೆ ಒಂದೇ ರಾಶಿಯಲ್ಲಿ 2 ತಿಂಗಳುಗಳ ಕಾಲ ಇರುತ್ತಾನೆ. ಆದ್ದರಿಂದ ಸಂಕ್ರಮಣ ಇರುವುದಿಲ್ಲ..ಇದೇ ಅಧಿಕಮಾಸ.

ಭಗವಾನ್‌ ವಿಷ್ಣುವನ್ನು ಅಧಿಕ ಮಾಸದಲ್ಲಿ ಪುರುಷೋತ್ತಮ ನಾಮಕ ನಿಯಾಮಕನೆಂದು ಹೇಳುತ್ತೇವೆ. ಅಧಿಕ ಮಾಸದ ಅಧಿಪತಿಯೆಂದು ಕರೆಯಲಾಗುತ್ತದೆ. ವಿಷ್ಣು ಪುರಾಣದಲ್ಲಿ ಇದರ ಕತೆಯನ್ನು ವಿವರಿಸಲಾಗಿದೆ. ಹಿಂದೆ ಭಗವಂತ ಒಂದೊಂದು ಮಾಸವನ್ನು ಒಬೊಬ್ಬ ದೇವರುಗಳಿಗೆ ಹಂಚಿಕೆ ಮಾಡಿ ಅಧಿಕ ಮಾಸವನ್ನ ಸೂರ್ಯ ಭಗವಾನರಿಗೆ ಹಂಚಿತ್ತಾರೆ.. ಆದರೆ ಸೂರ್ಯನು ಈ ಮಾಸವು ಮಲಮಾಸ ವಾಗಿರುವುದರಿಂದ ಯಾವುದೇ ಶುಭಕಾರ್ಯಗಳನ್ನು ನೆರೆವೇರಿಸದೆ ಇರುವುದರಿಂದ ಈ ಮಾಸವನ್ನು ಶುದ್ಧಿಕರಿಸುವಂತೆ ಮಹಾವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾರೆ.. ಆಗ ಭಗವಂತನು ಪುರುಷೋತ್ತಮ ರೂಪದಲ್ಲಿ ಈ ಮಾಸಕ್ಕೆ ಅಭಿಮುಖವಾಗಿ ನಿಂತು ಈ ಮಾಸದಲ್ಲಿ ಯಾರು ಪುಣ್ಯ ಆಚರಣೆಗಳನ್ನು ಮಾಡುತ್ತಾರೋ ಅದನ್ನು ನಾನು ಪುರುಷೋತ್ತಮ ರೂಪದಲ್ಲಿ ಸ್ವೀಕರಿಸಿ ಅವರ ಶರೀರದಲ್ಲಿನ ಪಾಪ(ಮಲ)ವನ್ನು ಕಳೆಯುತ್ತೇನೆಂದು ಹೇಳುತ್ತಾರೆ..ಎಂಬ ಉಲ್ಲೇಖವಿದೆ.. ಈ ಮಾಸದಲ್ಲಿ ಸ್ನಾನ, ಧ್ಯಾನ, ದಾನ,ದೀಪಗಲಿ ದ ಪುರುಷೋತ್ತಮನ ಆರಾಧನೆ ಮಾಡಿದರೆ ನಮ್ಮ ಜನ್ಮಜನ್ಮಾಂತರಗಳ ಪಾಪ ವಿಮೋಚನೆಯಾಗುವುದು.

ಈ ಮಾಸದಲ್ಲಿ ನಾವು ಮಾಡುವ ಯಾವುದೇ ದಾನ ಆಚರಿಸುವ ಧರ್ಮಾಚರಣೆಗಳು ಸಹ 33 ಕೋಟಿ ದೇವತೆಗಳಿಗೆ ಸೇರುತ್ತದೆ..ಕೋಟಿ ಎಂದರೆ ಸಂಸ್ಕೃತದಲ್ಲಿ ವರ್ಗ ಎಂಬರ್ಥ.. ಅಷ್ಟ(8) ವಸುಗಳು, ಏಕಾದಶ(11) ರುದ್ರರು', ದ್ವಾದಶಾದಿತ್ಯರು(12), ಪ್ರಜಾಪತಿಬ್ರಹ್ಮ, ವಶತ್ಕಾರ, ಇವರೇ ಆ 33 ವರ್ಗದ ದೇವರುಗಳು, ನಮ್ಮನ್ನೆಲ್ಲ ಆಶೀರ್ವಾದಿಸುವವರು.. ಈ 33 ದೇವರುಗಳಲ್ಲಿ ಅಂತರ್ಗತವಾಗಿ ಪುರುಷೋತ್ತಮ ನೆಲೆಸಿರುವ ದರಿಂದ ನಮ್ಮ ಪೂಜೆಗಳು ಅವರೆಲ್ಲರಿಗೂ ಸೇರುತ್ತವೆ. ಹೀಗಾಗಿ ಎಲ್ಲಾ ದೇವತೆಗಳ ಆಶೀರ್ವಾದ ಅಧಿಕವಾಗಿ ಲಭಿಸುತ್ತದೆ.

 

ಅಧಿಕ_ಮಾಸದ_ಮಹತ್ವ

 

ಹಿಂದೂ ಧರ್ಮದ ಪ್ರಕಾರ, ಪ್ರತಿಯೊಂದು ಜೀವವೂ ಪಂಚಭೂತಗಳಿಂದ ನಿರ್ಮಿತವಾಗಿರುತ್ತದೆ. ಈ ಪಂಚಮಹಾಭೂತಗಳಲ್ಲಿ ಜಲ, ಅಗ್ನಿ , ವಾಯಗುರುಭ್ಯ ಭೂಮಿ ಅಂದರೆ ಪೃಥ್ವಿ ಸಮ್ಮಿಲನವಾಗಿದೆ. ಪ್ರಕೃತಿಯ ಅನುರೂಪವಾಗಿ ಈ ಐದು ತತ್ವಗಳು ನಮ್ಮೊಂದಿಗಿರುತ್ತದೆ. ಅಧಿಕ ಮಾಸದಲ್ಲಿ ಸಮಸ್ತ ಧಾರ್ಮಿಕ ಕಾರ್ಯಗಳು, ಧ್ಯಾನ ,ಯೋಗ, ಪೂಜೆ, ವ್ರತಗಳು ಹಾಗೂ ಸಿದ್ಧಿ ಮೂಲಕ ಸಮ್ಮಿಲನಗೊಳಿಸಲು ಪ್ರಯತ್ನಿಸುತ್ತದೆ. ಈ ಸಂಪೂರ್ಣ ಮಾಸದಲ್ಲಿ ತಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಯಿಂದ ವ್ಯಕ್ತಿಯು ಭೌತಿಕ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವನು. ಅಧಿಕ ಮಾಸದಲ್ಲಿ ಮಾಡಿದ ಧಾರ್ಮಿಕ ಕಾರ್ಯವು ಇತರ ಯಾವುದೇ ತಿಂಗಳಲ್ಲಿ ಮಾಡಿದ ಪೂಜೆಗಿಂತ 10 ಪಟ್ಟು ಹೆಚ್ಚು ಫಲಿತಾಂಶವನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ.

ಅಧಿಕ_ಮಾಸದಲ್ಲಿ_ಏನು_ಮಾಡಬೇಕು..? ಏನು ಮಾಡಬಾರದು..?

ಅಧಿಕ ಮಾಸದಲ್ಲಿ ಹೆಚ್ಚಾಗಿ ಹಿಂದೂಗಳು ಉಪವಾಸ , ಪೂಜೆ, ವ್ರತ, ಧ್ಯಾನ, ಭಜನೆ, ಕೀರ್ತನೆಗಳನ್ನು ಅವರ ಜೀವನ ಶೈಲಿಯನ್ನಾಗಿ ಮಾಡಿಕೊಳ್ಳುತ್ತಾರೆ. ಪೌರಾಣಿಕ ಸಿದ್ಧಾಂತದ ಪ್ರಕಾರ, ಈ ಮಾಸದ ಸಮಯದಲ್ಲಿ ಯಜ್ಞ, ಹವನ ಅಷ್ಟೇ ಅಲ್ಲದೆ ಶ್ರೀಮದ್ ದೇವಿ ಭಾಗವತ, ಶ್ರೀ ಭಗವದ್ ಪುರಾಣ, ಶ್ರೀ ಶಿವ ಪುರಾಣವನ್ನು, ಶ್ರೀ ವಿಷ್ಣು ಸಹಸ್ರನಾಮಾವಳಿ, ಭವಿಷ್ಯೋತ್ತರ ಪುರಾಣ ಇನ್ನೂ ಇತ್ಯಾದಿಗಳನ್ನು ಕೇಳುವುದು, ಜಪಿಸುವುದು ವಿಶೇಷ ರೂಪದಲ್ಲಿ ಫಲದಾಯಕವಾಗಿರುತ್ತದೆ. ಅಧಿಕ ಮಾಸದಲ್ಲಿ ಇಷ್ಟ ದೇವತೆಗಳ ಮಂತ್ರವನ್ನು ಜಪಿಸುವ ಸಾಧಕರಿಗೆ ಭಗವಂತನು ಸ್ವಯಂ ಆಶೀರ್ವಾದವನ್ನು ನೀಡುತ್ತಾನೆ. ಅವರ ಪಾಪಗಳು - ಕರ್ಮಗಳು ನಾಶವಾಗುತ್ತದೆ ಮತ್ತು ಅವರ ಆಸೆಗಳು ಈಡೇರುತ್ತವೆ.

ಶ್ರೀ ಸದಾನಂದ ಶ್ರೀಗಳು

ಶ್ರೀ ಸಿದ್ದಾಶ್ರಮ ಬಂಗಾರಿ ಕ್ಯಾಂಪ್ ಸಿಂಧನೂರು
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್