ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಏಳು–ಎಂಟು ದಿನಕ್ಕೊಮ್ಮೆ ನೀರು! ಸಿಂಧನೂರು ನಗರಸಭೆ ನಿದ್ದೆಯಲ್ಲಾ..? – ಕುಡಿಯುವ ನೀರಿಗಾಗಿ ಜನರ ಹಾಹಾಕಾರ

Advertisement
ಸಿಂಧನೂರು:ಜನವರಿ 29
ಚಳಿಗಾಲದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರೆ, ಇದಕ್ಕಿಂತ ದೊಡ್ಡ ಆಡಳಿತ ವೈಫಲ್ಯ ಇನ್ನೇನು ಬೇಕು? ಸಿಂಧನೂರು ನಗರದಲ್ಲಿ ಏಳು ರಿಂದ ಎಂಟು ದಿನಕ್ಕೊಮ್ಮೆ ಕೇವಲ ಎರಡು ಗಂಟೆಗಳಷ್ಟೇ ನೀರು ಬಿಡುತ್ತಿರುವ ನಗರಸಭೆಯ ಧೋರಣೆ ಸಾರ್ವಜನಿಕರ ಸಹನಶೀಲತೆಯನ್ನೇ ಪರೀಕ್ಷಿಸುವಂತಾಗಿದೆ.

ಎರಡು ಗಂಟೆಗಳ ಕಾಲ ಬಿಡುವ ನೀರೂ ಸಹ ಕಸ–ಕಡ್ಡಿ, ಮಣ್ಣು ಮಿಶ್ರಿತ ಗಲೀಜು ನೀರು ಆಗಿದ್ದು, ಅದನ್ನು ಕುಡಿಯುವುದಂತೂ ದೂರ, ಮನೆಯ ಬಳಕೆಗೂ ಯೋಗ್ಯವಲ್ಲ ಎಂಬ ಆರೋಪಗಳು ಎಲ್ಲೆಡೆ ಕೇಳಿಬರುತ್ತಿವೆ. ಕುಡಿಯುವ ನೀರು ಕೊಡಲಾಗದ ನಗರಸಭೆ ಇನ್ನೇನು ಆಡಳಿತ ನಡೆಸುತ್ತಿದೆ? ಎಂಬ ಪ್ರಶ್ನೆ ಸಾರ್ವಜನಿಕರ ಮನಸ್ಸಿನಲ್ಲಿ ಮೂಡಿದೆ.


ಏಷ್ಯಾದಲ್ಲಿ ನಂಬರ್ ಒನ್ ತಾಲೂಕು ಎಂಬ ಹೆಸರಿಗಿಂತ ವಾಸ್ತವ್ಯವೇ ಬೇರೆ ಎಂಬುದನ್ನು ಸಿಂಧನೂರು ನಗರಸಭೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ಏಳು–ಎಂಟು ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ಜನರು ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗಿ ಹಣ ಸುರಿಯುವಂತಾಗಿದೆ. ಬಡವರ ಪಾಲಿಗೆ ಇದು ಶೋಷಣೆಯೇ ಆಗಿದ್ದು, ಮಧ್ಯಮ ವರ್ಗದವರಿಗೆ ಭಾರೀ ಆರ್ಥಿಕ ಹೊಡೆತವಾಗಿದೆ.

ವಾಟರ್‌ಮ್ಯಾನ್‌ಗಳಿಗೆ ದೂರು ನೀಡಿದರೆ ಕಿವಿಗೇ ಬೀಳುವುದಿಲ್ಲ, ನಗರಸಭೆ ಆಯುಕ್ತರಿಗೆ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಹಾಗಾದರೆ ಈ ನಗರವನ್ನು ಯಾರು ನೋಡಿಕೊಳ್ಳುತ್ತಿದ್ದಾರೆ? ಅಧಿಕಾರಿಗಳು ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆಯೇ ಅಥವಾ ಜನರ ಸಂಕಷ್ಟವನ್ನು ನೋಡಲು ಅಸಮರ್ಥರಾಗಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಸ್ಥಳೀಯರ ಪ್ರಕಾರ, ಮೂರರಿಂದ ನಾಲ್ಕು ದಿನಕ್ಕೊಮ್ಮೆ ನೀರು ಬಿಡುವುದೇ ಸಾಕು, ಆಗ ಕೆರೆಗಳಲ್ಲೂ ನೀರು ಉಳಿಯುತ್ತದೆ, ಜನರಿಗೂ ನೆಮ್ಮದಿ ಸಿಗುತ್ತದೆ. ಆದರೆ ಯಾವುದೇ ಯೋಜನೆ ಇಲ್ಲದೆ, ಬೇಕಾಬಿಟ್ಟಿಯಾಗಿ ಏಳು–ಎಂಟು ದಿನಕ್ಕೊಮ್ಮೆ ನೀರು ಬಿಡುವ ಮೂಲಕ ಸಾರ್ವಜನಿಕರನ್ನು ಕಿರಿಕಿರಿ ಮಾಡಲಾಗುತ್ತಿದೆ ಎಂಬ ಆರೋಪ ಗಂಭೀರವಾಗಿದೆ.

ಚಳಿಗಾಲದಲ್ಲೇ ಈ ಸ್ಥಿತಿ ಇದ್ದರೆ, ಬೇಸಿಗೆಯಲ್ಲಿ ಸಿಂಧನೂರಿನ ಜನರು ನೀರಿಗಾಗಿ ರಸ್ತೆಗೆ ಇಳಿಯಬೇಕಾಗುತ್ತದೆಯೇ? ಎಂಬ ಆತಂಕ ಎಲ್ಲೆಡೆ ವ್ಯಕ್ತವಾಗಿದೆ. ಇದಕ್ಕೂ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ, ಜನರ ಸಹನೆ ಮುಗಿಯುವ ದಿನ ದೂರವಿಲ್ಲ.

ಈಗಲಾದರೂ ನಗರಸಭೆ ಆಯುಕ್ತರು ನಿದ್ರಾವಸ್ಥೆಯಿಂದ ಎಚ್ಚೆತ್ತು, ಸಂಬಂಧಪಟ್ಟ ವಾಟರ್‌ಮ್ಯಾನ್‌ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ನೀರು ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಇಲ್ಲವಾದರೆ, “ಏಷ್ಯಾದ ನಂಬರ್ ಒನ್ ತಾಲೂಕು” ಎಂಬ ಹೆಸರಿಗೆ ಸಿಂಧನೂರು ನಗರವೇ ಅಪಮಾನವಾಗಲಿದೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ