ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಸೆ.20 ರಂದು ಬೃಹತ್ ಪ್ರತಿಭಟನೆ.

Advertisement
ಆಗಸ್ಟ್ 31 ಮಸ್ಕಿ : ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಸುಪ್ರೀಂ ಕೋರ್ಟ್‌ನ ಒಳ ಮೀಸಲಾತಿ ಪರವಾದ ತೀರ್ಪು ಸ್ವಾಗತಿಸಿ ಹಾಗೂ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನುಸಾರ ರಾಜ್ಯದಲ್ಲಿಯೂ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ದಿನಾಂಕ: 20-09-2024 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದರ ಪ್ರಯುಕ್ತ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಪ್ರಮುಖರ ಸಭೆಯನ್ನು ನಡೆಸಲಾಯಿತು. ಈ  ಸಭೆಯಲ್ಲಿ ಹಿರಿಯ ಮುಖಂಡರು ಪ್ರತಿಭಟನೆಯ ರೂಪುರೇಷೆಗಳನ್ನು ಕುರಿತು ವಿಸ್ತೃತವಾಗಿ ಚರ್ಚಿಸಿದರು.

https://youtu.be/GLhQxgxyRlc?si=1fI4Kvp5UMePq4s1

ಈ ಸಭೆಯನ್ನು ಉದ್ದೇಶಿಸಿ ದಾನಪ್ಪ ನೀಲೋಗಲ್ ರವರು ಮಾತನಾಡಿ ಮೂರು ದಶಕಗಳಿಂದಲು ಹಕ್ಕು ವಂಚಿತ ಅಸ್ಪೃಶ್ಯರು ತಮಗೆ ಸಿಗಬೇಕಿರುವ ನ್ಯಾಯಬದ್ದ ಹಕ್ಕುಗಳಿಗಾಗಿ ಸುಪ್ರೀಂಕೋರ್ಟ್ ತನಕ, ಕೇಂದ್ರ ಸರಕಾರದ ತನಕ ಹೋಗಿ ಮೀಸಲಾತಿ ವರ್ಗೀಕರಣದ ಪರವಾಗಿ ಜಡ್ಜ್ ಮೆಂಟ್ ಗಳನ್ನು ಗಳಿಸಿಕೊಂಡರೂ ಮತ್ತೆ ಅದನ್ನು ಜಾರಿಗೊಳಿಸಲು ಮತ್ತೆ ಮತ್ತೆ ಬೀದಿ ಹೋರಾಟ ಮಾಡುವಂತೆ ಹೀನ ಸಂದರ್ಭಗಳನ್ನ ಸೃಷ್ಟಿ ಮಾಡುವ ಈ ಸಾಮಾಜಿಕ ನ್ಯಾಯ ವಿರೋಧಿ ಹಿತಾಸಕ್ತಿಗಳ ಮನಸು, ಶೋಷಿತರ ಮೇಲಿನ ಅಸೂಯೆ, ಅಸಹಿಷ್ಣುತೆಯ ರಾಜಕಾರಣಗಳು, ಕುಟಿಲ ನಡೆಗಳು ಇವೆಲ್ಲವು ನ್ಯಾಯ ಪ್ರಜ್ಞೆಯುಳ್ಳ ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿವೆ ಎಂದರು.

https://youtu.be/fTL2hDPouCs?si=8rFYrtCEtMHrLe4k

ಈ ಸಂದರ್ಭದಲ್ಲಿ  ದೊಡ್ಡಪ್ಪ ಮುರಾರಿ, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ಹನುಮಂತಪ್ಪ ಪರಾಪೂರು, ಬಿ.ತಿಕ್ಕಯ್ಯ, ಮಲ್ಲಯ್ಯ ಬಳ್ಳಾ, ದುರ್ಗಾ ಪ್ರಸಾದ, ಸುರೇಶ ಅಂತರಗಂಗೆ, ಹನುಮಂತಪ್ಪ ವೆಂಕಟಾಪುರ ಹಾಗೂ ಇನ್ನಿತರ ಹಲವು ಮುಖಂಡರು, ಪ್ರಮುಖರು ಉಪಸ್ಥಿತರಿದ್ದರು.

 

ವರದಿ ಎಚ್. ಕೆ. ಬಡಿಗೇರ್
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ