ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಕಲ್ಲು ನಾಗರಕ್ಕೆ ಹಾಲು ಎರೆಯುವ ಬದಲು ಮಕ್ಕಳಿಗೆ ಹಾಲು ವಿತರಿಸಿ

Advertisement
ರಾಯಚೂರು ಆ ೨೧ : ಮಾನವ ಬಂಧುತ್ವ ವೇದಿಕೆ ಹಾಗೂ ರವಿ ಪಾಟೀಲ್ ಫೌಂಡೇಶನ್ ರಾಯಚೂರು ವತಿಯಿಂದ ನಗರ ಮತ್ತು ಗ್ರಾಮೀಣ ಭಾಗದ ವಿವಿಧ ಕಡೆಗಳಲ್ಲಿ ಸೋಮವಾರ ದಂದು ನಾಗರ ಪಂಚಮಿ ಬದಲಾಗಿ ವೈಜ್ಞಾನಿಕ, ವೈಚಾರಿಕ ಚಿಂತನೆ ಬಿತ್ತುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು.



ಪ್ರತೀ ವರ್ಷ ರಾಜ್ಯದಲ್ಲಿ 40 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತಿದ್ದಾರೆ ಆದರಿಂದ ನಾಗರ ಪಂಚಮಿ ನೆಪದಲ್ಲಿ ಕಲ್ಲುನಾಗರಕ್ಕೆ ಪೌಷ್ಠಿಕ ಆಹಾರವಾದ ಹಾಲು ಹುತ್ತಕ್ಕೆ ಹಾಕಿ ವ್ಯರ್ಥ ಮಾಡುವ ಬದಲು ಜನರಲ್ಲಿ ಬಿತ್ತಿದ ಮೌಢ್ಯವನ್ನು ತೊಲಗಿಸಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿ ಹಬ್ಬವನ್ನು ತಾಲ್ಲೂಕಿನ ಪದ್ಮಾವತಿ ನಗರ, ಅಂಬೇಡ್ಕರ್ ನಗರ, ಉರುಕುಂದ ಈರಣ್ಣ ಕಾಲೋನಿ, ಗ್ರಾಮಾಂತರದ ಮಂಡಲಗೇರಾ ಗ್ರಾಮದಲ್ಲಿ ಆಚರಿಸಲಾಯಿತು.

ರವಿ ಪಾಟೀಲ್ ಫೌಂಡೇಶನ್ ಅಧ್ಯಕ್ಷರಾದ ರವಿ ಪಾಟೀಲ್ ಮಾತನಾಡುತ್ತಾ.. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ವಿತರಿಸುವುದರಿಂದ ಜನರಲ್ಲಿ ವೈಚಾರಿಕತೆ ಬಿತ್ತಬೇಕು. ಕಲ್ಲು ನಾಗರಕ್ಕೆ ಹಾಲು ವಿತರಿಸುವುದರಿಂದ ಹಾವು ಹಾಲನ್ನು ಕುಡಿಯುವುದಿಲ್ಲ ಈ ರೀತಿಯ ಮೌಲ್ಯವನ್ನು ಜನರಲ್ಲಿ ತೊಲಗಿಸಿ ವೈಜ್ಞಾನಿಕ ವೈಚಾರಿಕತೆಯನ್ನು ಬಿತ್ತಬೇಕು ಅ ನಿಟ್ಟಿನಲ್ಲಿ ಬಸವಣ್ಣ ನವರ ಲಿಂಗೈಕ್ಯರಾದ ದಿನದಂದು ಬಸವ ಪಂಚಮಿ ಮೂಲಕ ಮಕ್ಕಳಿಗೆ ಹಾಲು ವಿತರಿಸಲಾಗುವುದು ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಲಕ್ಷ್ಮಣ್ ಮಂಡಲಗೇರಾ ಮಾತನಾಡುತ್ತಾ " ಪಂಚಮಿ ಹಬ್ಬವನ್ನು ನಾಗರ ಹಾವಿಗೆ ತಳಕು ಹಾಕಿ ಸಾಂಪ್ರದಾಯವಾದಿಗಳು, ಪುರೋಹಿತಶಾಹಿಗಳು ಈ ಹಬ್ಬದ ನೈಜ ಆಚರಣೆಗಳ ಮಹತ್ವವನ್ನು ಮರೆಮಾಚಿ ಕೇವಲ ಅಮೂಲ್ಯವಾದ ಹಾಲನ್ನು ಕಲ್ಲಿನ ನಾಗರ ಮೂರ್ತಿಗೆ ಎರೆಯುವ ಪರಮ ಮೌಢ್ಯವನ್ನು ಈ ಹಬ್ಬದಲ್ಲಿ ತುರುಕಲಾಗಿದೆ ನಾಗರಕ್ಕೆ ಹಾಲೆರೆಯದಿದ್ದರೆ ಹಾವಿಗೆ ಕೋಪ ಬರುತ್ತದೆˌ ನಾಗದೋಷ ಕಾಡುತ್ತದೆ ಎಂದು ಜನರ ಮನಸ್ಸಲ್ಲಿ ಮೌಢ್ಯವನ್ನು ತುಂಬಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜಶೇಖರ ಪಾಟೀಲ್ ಮನ್ಸಲಾಪೂರ, ಶರಣು ಸಾಹುಕಾರ, ಲಕ್ಷ್ಮಣ್ ದಾಸರಿ, ಲಕ್ಷ್ಮಣ್ ಮಂಡಲಗೇರಾ, ಮಂಜುನಾಥ, ರಾಜು ಗ್ರಾ.ಪಂ.ಸದಸ್ಯರು ಮಂಡಲಗೇರಾ, ಜಂಬಪ್ಪ , ರಘುಪತಿ, ಮುನಿಯಪ್ಪ ಇನ್ನಿತರರು ಇದ್ದರು..
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್