ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಕೃಷ್ಣಾ ನದಿ ನೀರು ನಿಲ್ಲಿಸಿ ಜನ, ಜಾನುವಾರು, ಬದುಕಿಸಿ, ರೈತ ಸಂಘ ಒತ್ತಾಯ

ಬಾಗಲಕೋಟೆ : ದಿನದಿಂದ ದಿನಕ್ಕೆ ಕೃಷ್ಣಾ ನದಿ ನೀರು ಖಾಲಿ ಯಾಗುತ್ತಿರುವುದನ್ನು ತಡೆಗಟ್ಟುಲು ಆಲಮಟ್ಟಿ ಹಿನ್ನಿರನ್ನು ಬಿಡದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಘದ ಹಾಗೂ ಭಾರತೀಯ ಕಿಸಾನ್ ಸಂಘ ನೇತೃತ್ವದಲ್ಲಿ ರೈತರು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ರೈತ ಮುಖಂಡ ಶಿವನಗೌಡ ಪಾಟೀಲ್ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿರುವ ಕೊರ್ತಿ,ಟಕ್ಕಳಕಿ, ಗೋವಿನದಿನ್ನಿ, ರೊಳ್ಳಿ,ಗರಡದಿನ್ನಿ ಢವಳೇಶ್ವರ, ಸೊನ್ನ,ಗಿರಾಗಂವ ಬಾಡಗಿ,ಹಂಚಿನಾಳ ಗ್ರಾಮದ ರೈತರು ಕೃಷ್ಣಾ ಹಾಗೂ ಘಟಪ್ರಭಾ ನದಿಯನ್ನೇ ನಂಬಿ ಜನಜಾನುವಾರುಗಳು ಬದುಕುತ್ತಿವೆ. ಬೇಸಿಗೆ ಆರಂಭಕ್ಕೆ ಮುನ್ನವೇ ತಾಲೂಕಿನ ಕೃಷ್ಣಾ ನದಿಯ ನೀರು ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನೀರನ್ನು ತಡೆಹಿಡಿಬೇಕು‌‌. ಯಾಕೆಂದರೆ ಕಳೆದ ಏಳೆಂಟು ವರ್ಷಗಳ ಹಿಂದೆ ಕೃಷ್ಣಾ ನದಿಯ ನೀರು ಖಾಲಿಯಾಗಿ ತೊಂದರೆಯನ್ನು ಅನುಭವಿಸಿದ್ದಾರೆ. ಕೂಡಲೇ ಅಂತಹ ಸಮಸ್ಯೆ ಮರುಕಳಿಸುವ ಮುನ್ನ ಎಚ್ಚೆತ್ತುಕೊಂಡು ಸಂಬಂಧಪಟ್ಟವರು ನೀರನ್ನು ತಡೆಹಿಡಿದು ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.ಮೂರು ದಿನಗಳಲ್ಲಿ ನೀರನ್ನು ತಡೆಹಿಡಿಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿ ತಹಸಿಲ್ದಾರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಿದ್ದಣ್ಣ ಗಾಡದ,ವಿರೂಪಾಕ್ಷಯ್ಯ ಹಿರೇಮಠ ಭಾರತ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರು,ಡಿ ಎಂ ನದಾಫ್ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅನಿಲಗೌಡ ಪಾಟೀಲ್, ಮಾಹಾಂತೇಶ್ ಜಾರಾಳಿ,ಅವಿನಾಶ್ ಘೋರ್ಪಡೆ,ಅರವಿಂದ್ ಚೂರಿ,ನಾಗಪ್ಪ ಗುಂಜೆಟಿ,ಸತೀಶ್ ಜಾಧವ,ಸಚಿನ್ ಪತ್ತಾರ,ಅಮೀನಸಾಬ್ ಬುಕಿಟಗಾರ್, ಕುಮಾರ್ ಹಿರೇದೇಸಾಯಿ, ಶ್ರೀಶೈಲ ಬರಗುಂಡಿ, ಹಣಮಂತ ದಳವಾಯಿ,ಶ್ರೀಕಾಂತ ರೋನಿಹಾಳ್,ಹಣಮಂತ ಮಳಗಾವಿ,ಮಲ್ಲಿಕಾರ್ಜುನ ತಳವಾರ,ಕೃಷ್ಣಾ ಜಾಧವ, ಯಂಕಪ್ಪ ಶಿರಬೂರ,ಸಿದ್ದಪ್ಪ ದೇಸಾಯಿ,ಹಣಮಂತ ನಂದವಾಡಗಿ,ಅರವಿಂದ್ ಪೂಜಾರಿ,ವಿಠ್ಠಲ್ ಕಾರಜೋಳ, ಸೇರಿ ಅನೇಕರು ಈ ವೇಳೆ ಉಪಸ್ಥಿತರಿದ್ದರು.

 

ವರದಿ :- ರಾಜು ಬುಕೇಟಗಾರ್

 
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
 ಸಿಂಧನೂರಿನ ಯುವಕ ಕಾಣೆಯಾದ ಪ್ರಕರಣ: ಪೋಷಕರ ಕಣ್ಣೀರಿನ ಮನವಿಸುಳ್ಳು ದೂರುಗಳಿಗೆ ಕಡಿವಾಣ: 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್ಭ್ರೂಣಲಿಂಗ ಪತ್ತೆ–ಹತ್ಯೆ ಪ್ರಕರಣ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಜೈಲು ಪಾಲು“50 ವರ್ಷಗಳ ಬದುಕಿಗೆ 15 ದಿನಗಳ ಗಡುವು: ಗಾಂಧಿನಗರದ 80 ಬಡ ಕುಟುಂಬಗಳ ಮೇಲೆ ಜೆಸಿಬಿ ನೆರಳು!”ಪೊಲೀಸ್ ಪೇದೆ ಮದುವೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ – ಮಾನವೀಯತೆಗೆ ಮಾದರಿ ಘಟನೆನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತ!ಬರುವ ದಿನಗಳು ಅಶಾಂತಿ ಸೂಚನೆ – ಅನ್ನ ನೀರಿಗೆ ಆಹಾಕಾರ: ಕೋಡಿಮಠ ಸ್ವಾಮೀಜಿ ಭವಿಷ್ಯಚಲಿಸುತ್ತಿದ್ದ ಬಸ್ ಏಕಾಏಕಿ ಜಮೀನಿಗೆ ನುಗ್ಗಿದ ಘಟನೆ – ನೂರಕ್ಕೂ ಹೆಚ್ಚು ಪ್ರಯಾಣಿಕರು ಪಾರು!ಕಲಮಂಗಿ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ – ವಿದ್ಯಾರ್ಥಿಗಳ ಭರ್ಜರಿ ಸಾಧನೆ“ಬಿಸಿಲಿನ ಅಬ್ಬರ: ಕರ್ನಾಟಕಲ್ಲಿ ಲಾಕ್‌ಡೌನ್ ಬರುತ್ತಾ..?”625ಕ್ಕೆ 625: ರಾಯಚೂರು ಸುಖದೇವ್ ಸಾಧನೆಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ80 ಅಡಿ ಕೆಳಗೆ ನೀರು: ಪೈದೊಡ್ಡಿ ವೃದ್ಧನ ಗೋಳು ಕೇಳುವರು ಯಾರು “ಪುರಾಣದ ಬಸವಣ್ಣ ಅಲ್ಲ — ಸಮಾಜ ಬದಲಿಸಿದ ಮನುಷ್ಯ ಬಸವಣ್ಣ”