ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಗ್ರಂಥಾಲಯಗಳು ಬದುಕನ್ನ ಸುಂದರವಾಗಿ ರೂಪಿಸುತ್ತವೆ;ಡಾ.ಹನುಮಂತಪ್ಪ ಎಂ.

Advertisement
ಅಗಸ್ಟ್ 12.  ಸಿಂಧನೂರಿನ ಶ್ರೀ ಆದಿತ್ಯ ಪದವಿ ಪೂರ್ವ ಕಾಲೇಜಿನಲ್ಲಿ ಕದಂಬ KAS ಅಕಾಡಮಿ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಗಳ ಬಹುಮಾನ ವಿತರಣೆ ಹಾಗೂ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಹನುಮಂತಪ್ಪ.ಎಂ ಸಹಾಯಕ ಪ್ರಾಧ್ಯಾಪಕರು ಸ್ಪರ್ಧಾರ್ಥಿಗಳು ತಮ್ಮ ಬದುಕಿನ ಬವಣೆಯನ್ನು ತೀರಿಸಲು ಓದುವುದು ಅಗತ್ಯವಿದೆ,ಯುವ ಜನರು ಗ್ರಂಥಾಲಯಗಳಿಗೆ ಪ್ರವೇಶ ಮಾಡಬೇಕು ಹೆಚ್ಚಿನ ಜ್ಞಾನ ಸಂಪಾದಿಸಿ ಉದ್ಯೋಗ ಪಡೆದುಕೊಂಡು ತಂದೆ ತಾಯಿಗಳ ಗೌರವ ಹೆಚ್ಚಿಸಬೇಕು ಹಾಗೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು.ಸ್ಪರ್ಧಾರ್ಥಿಗಳು ಯಾರಿಗಾದರೂ ಮೋಸ ಮಾಡಿದರೂ ಪರವಾಗಿಲ್ಲ ಆದರೆ ತಂದೆ ತಾಯಿಗಳಿಗೆ ಮೋಸ ಮಾಡಬಾರದು ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸಾಧಕ ಶ್ರೀ ಪ್ರಶಸ್ತಿ ವಿಜೇತರು ಮತ್ತು ವಿಶೇಷ ಸನ್ಮಾನಿತರಾದ ಡಾ. ಹುಸೇನಪ್ಪ ಅಮರಾಪುರ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಿನ ಹವ್ಯಾಸ ಹೆಚ್ಚಿಸಿ ಕೊಳ್ಳಬೇಕು,ಸತತವಾದ ಪ್ರಯತ್ನದ ಫಲದಿಂದ ಯಶಸ್ಸು ಪಡೆಯಲು ಸಾಧ್ಯವಿದೆ, ಸಾಧನೆ ಎನ್ನುವುದು ಸೋಮಾರಿಯ ಸ್ವತ್ತಲ್ಲ ಅದು ಸಾಧಕನ ಸ್ವತ್ತ.ನಮ್ಮ ಘರ್ಜನೆ ಪ್ರತಿಧ್ವನಿಸಲು ಶಿಕ್ಷಣದ ಹಾಲು ಕುಡಿಯುತ್ತಿರಬೇಕು ಆಗ ಮಾತ್ರ ಸಮಾಜದಲ್ಲಿ ನಮ್ಮ ಸ್ಥಾನವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವೆಂದು ಸ್ಪರ್ಧಾರ್ಥಿಗಳಿಗೆ ತಿಳಿಸಿದರು,ಕಾರ್ಯಕ್ರಮದಲ್ಲಿ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕದಂಬ KAS ಅಕಾಡೆಮಿ ಪ್ರಧಾನ ನಿರ್ದೇಶಕರಾದ ಶಂಕರ್ ವಾಲಿಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ರಮೇಶ ಹಲಗಿ ಪ್ರಾಸ್ತಾವಿಕ ನುಡಿಗಳಾಡಿದರು ತಾಯಪ್ಪ ತಿಡಿಗೋಳ ನಿರೂಪಿಸಿದರು ಶರಣಕುಮಾರ ಹಲಗಿ ,ಮಾರುತಿ ಸೋಮಲಾಪುರ, ಶಿವರಾಜ ಜಿ. ಯು.ಎಸ್. ನಾಯಕ್ ಗೋನವಾರ ,ಜಡಿಸ್ಪಾಮಿ ಗುಡುದೂರು ಉಪಸ್ಥಿತರಿದ್ದರು, ಹಾಗೂ ನೂರಾರು ಸ್ಪರ್ಧಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ