ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಕಲಮಂಗಿ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ – ವಿದ್ಯಾರ್ಥಿಗಳ ಭರ್ಜರಿ ಸಾಧನೆ

Advertisement

BB NEWS KANNADA 

Advertisement

ಸಿಂಧನೂರು, ಏಪ್ರಿಲ್ 26: ತಾಲೂಕಿನ ಗ್ರಾಮದ ಸರ್ಕಾರಿ ಪ್ರೌಢಶಾಲೆ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸಿ ಗಮನಸೆಳೆದಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಮಲ್ಲಪ್ಪ ಬಾದರ್ಲಿ ತಿಳಿಸಿದ್ದಾರೆ.

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯ 10ನೇ ತರಗತಿಯ ಎಲ್ಲಾ 22 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆಗೆ ಶೇ.100ರಷ್ಟು ಫಲಿತಾಂಶ ದೊರೆತಿದೆ. ಈ ಮೂಲಕ ಶಾಲೆ ತಾಲೂಕಿನ ಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿದೆ.

🏆 ಮೆರೆದ ಪ್ರತಿಭೆಗಳು

  • ಬಸನಗೌಡ (ತಂದೆ: ಈರನಗೌಡ) – 564 ಅಂಕ (ಶೇ. 90.24) → ಪ್ರಥಮ ಸ್ಥಾನ
  • ಬಸಮ್ಮ (ತಂದೆ: ಸೋಮಲಿಂಗಪ್ಪ) – 540 ಅಂಕ (ಶೇ. 86.40) → ದ್ವಿತೀಯ ಸ್ಥಾನ
  • ರಮೇಶ್ (ತಂದೆ: ಮರಿಸ್ವಾಮಿ) – 504 ಅಂಕ (ಶೇ. 80.64) → ತೃತೀಯ ಸ್ಥಾನ

📊 ಫಲಿತಾಂಶದ ವಿವರ

  • ಡಿಸ್ಟಿಂಕ್ಷನ್: 2 ವಿದ್ಯಾರ್ಥಿಗಳು
  • ಪ್ರಥಮ ಶ್ರೇಣಿ: 13 ವಿದ್ಯಾರ್ಥಿಗಳು
  • ದ್ವಿತೀಯ ಶ್ರೇಣಿ: 5 ವಿದ್ಯಾರ್ಥಿಗಳು
  • ತೃತೀಯ ಶ್ರೇಣಿ: 2 ವಿದ್ಯಾರ್ಥಿಗಳು

👏 ಅಭಿನಂದನೆಗಳ ಸುರಿಮಳೆ

ಈ ಸಾಧನೆಗೆ ಕಾರಣರಾದ ಶಿಕ್ಷಕರಾದ ರವಿಚಂದ್ರ, ವೀರೇಶ್ ಗೋನವಾರ, ಎಂ. ಮಾರುತಿ, ರೂಪಾ ಎಸ್, ಬಸವರಾಜ, ಮೌನೇಶ್ ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ ಮತ್ತು ಪೋಷಕರಿಗೆ ಅಭಿನಂದನೆಗಳು ವ್ಯಕ್ತವಾಗಿವೆ.
ಎಸ್‌ಡಿಎಂಸಿ ಅಧ್ಯಕ್ಷರಾದ ನೀಲಪ್ಪ ತಾವರಗೇರಾ, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ.

💰 ಪ್ರೋತ್ಸಾಹಕ ಬಹುಮಾನ ಘೋಷಣೆ

ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಬಸನಗೌಡ ಅವರಿಗೆ ಗ್ರಾಮದ ಯುವ ಮುಖಂಡ ಶಿವಪ್ರಸಾದ ಹೊನ್ನನಗೌಡ ಕುಲಕರ್ಣಿ ಅವರು ₹5,000 ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

👉 ಗ್ರಾಮೀಣ ಭಾಗದಲ್ಲಿಯೂ ಉತ್ತಮ ಶಿಕ್ಷಣದ ಮೂಲಕ ದೊಡ್ಡ ಸಾಧನೆ ಸಾಧ್ಯವೆಂಬುದಕ್ಕೆ ಕಲಮಂಗಿ ಶಾಲೆಯ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ.

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ