ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಜನರ ತೆರಿಗೆ – ಭ್ರಷ್ಟರ ತಿಜೋರಿಗೆ?

Advertisement

KREIS ನೂರಾರು ಕೋಟಿ ಹಗರಣ: ಲೋಕಾಯುಕ್ತ ದಾಳಿಯಲ್ಲಿ ₹1.7 ಕೋಟಿ ನಗದು ವಶ
ಬೆಂಗಳೂರು:
ಜನಸಾಮಾನ್ಯರು ಶ್ರಮಪಟ್ಟು ಕಟ್ಟುವ ತೆರಿಗೆ ಹಣವು ಜನಹಿತಕ್ಕೆ ಬಳಸಲಾಗದೆ, ಕಡುಭ್ರಷ್ಟ ಅಧಿಕಾರಿಗಳು ಹಾಗೂ ಪರಮನೀಚ ರಾಜಕಾರಣಿಗಳ ಮನೆಗಳ ತಿಜೋರಿಯಲ್ಲಿ ಜಮೆಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ಭಾರೀ ಉದಾಹರಣೆ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ಚೆನ್ನಮ್ಮ, ಇಂದಿರಾಗಾಂಧಿ ಸೇರಿದಂತೆ ವಿವಿಧ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಸತಿ ಶಾಲೆಗಳ ಉಸ್ತುವಾರಿ ಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ನಲ್ಲಿ ನಡೆದಿರುವ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಹಗರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆ ಭಾರೀ ದಾಳಿ ನಡೆಸಿದೆ.

ಆದಾಯ ಮೀರಿದ ಆಸ್ತಿ ಪ್ರಕರಣದಡಿ KREIS ಸಂಸ್ಥೆಯ ಸೂಪರ್‌ಇಂಟೆಂಡಿಂಗ್ ಇಂಜಿನಿಯರ್ H.M. ಜನಾರ್ಧನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು,
👉 ಬರೋಬ್ಬರಿ ₹1.7 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ದಾಳಿಯ ವೇಳೆ ಲೋಕಾಯುಕ್ತ ಅಧಿಕಾರಿಗಳು ಹಣ ಎಣಿಸುವ ಯಂತ್ರದ ಮೂಲಕ ನಗದು ಎಣಿಸುತ್ತಿರುವ ದೃಶ್ಯಗಳ ವಿಡಿಯೋ ಇದೀಗ ಬಹಿರಂಗವಾಗಿದ್ದು, ಅದು ರಾಜ್ಯದ ಭ್ರಷ್ಟ ವ್ಯವಸ್ಥೆಯ ಘಂಟಾಘೋಷ ಎಂದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
KRS ಪಕ್ಷದ ದೂರು – ಈಗ ಸಾಬೀತಾದ ಆರೋಪ?
ಈ ಪ್ರಕರಣಕ್ಕೆ ಸಂಬಂಧಿಸಿ, ಕರ್ನಾಟಕ ರಾಷ್ಟ್ರ ಸಮಿತಿ (KRS Party) ಪಕ್ಷವು ಈಗಾಗಲೇ ಒಂದೆರಡು ತಿಂಗಳ ಹಿಂದೆಯೇ ಪತ್ರಿಕಾಗೋಷ್ಠಿ ನಡೆಸಿ KREIS ಸಂಸ್ಥೆಯಲ್ಲಿ ಭಾರೀ ಹಗರಣ ನಡೆಯುತ್ತಿದೆ ಎಂದು ಆರೋಪಿಸಿತ್ತು.
ಇದರ ಜೊತೆಗೆ ಲೋಕಾಯುಕ್ತ ಸಂಸ್ಥೆಯಲ್ಲಿಯೂ ಅಧಿಕೃತ ದೂರು ದಾಖಲಿಸಲಾಗಿತ್ತು.
ಇಂದಿನ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿರುವ ಅಪಾರ ಪ್ರಮಾಣದ ನಗದು, KRS ಪಕ್ಷ ಮಾಡಿದ್ದ ಆರೋಪಗಳಿಗೆ ಬಲ ನೀಡುವಂತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ನಗದೇ ಇಷ್ಟಾದರೆ, ಆಸ್ತಿ ಎಷ್ಟು?
ಒಬ್ಬ ಸರ್ಕಾರಿ ಅಧಿಕಾರಿ ಮನೆಯಲ್ಲಿ ಇಷ್ಟೊಂದು ನಗದು ಸಿಕ್ಕಿರುವುದೇ ಆತಂಕಕಾರಿ ಸಂಗತಿ.

➡️ ನಗದೇ ಇಷ್ಟಿದ್ದರೆ,
➡️ ಇನ್ನಷ್ಟು ಚರಾಚರ ಆಸ್ತಿ ಎಷ್ಟಿರಬಹುದು?
➡️ ಬೆನಾಮಿ ಹೂಡಿಕೆಗಳು ಎಷ್ಟು?
ಇದು ಬಡ ಮಕ್ಕಳ ಹೊಟ್ಟೆ ತುಂಬಿಸಬೇಕಿದ್ದ,
ಅವರಿಗೆ ಬಟ್ಟೆ-ಪುಸ್ತಕ ಕೊಡಬೇಕಿದ್ದ,
ಅವರ ಶಿಕ್ಷಣಕ್ಕಾಗಿ ಬಳಸಬೇಕಿದ್ದ ಹಣ ಎಂದು ಸಾಮಾಜಿಕ ಹೋರಾಟಗಾರರು ಪ್ರಶ್ನಿಸುತ್ತಿದ್ದಾರೆ.
ಮೌನವೇ ಭ್ರಷ್ಟಾಚಾರದ ಆಹಾರ?
ತೆರಿಗೆ ಕಟ್ಟುವ ಜನಸಾಮಾನ್ಯರು ಮೌನವಾಗಿದ್ದಾಗ, ಭಯಗೊಂಡಾಗ ಅಥವಾ “ಏನು ಮಾಡೋದು?” ಎಂದು ಕೈಕಟ್ಟಿ ಕುಳಿತಾಗಲೇ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಹಾಡುಹಗಲಿನ ದರೋಡೆಕೋರ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹುಟ್ಟಿಕೊಳ್ಳುತ್ತಾರೆ ಹಾಗೂ ಬೆಳೆದು ನಿಲ್ಲುತ್ತಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಈ ಪ್ರಕರಣದ ಸಂಪೂರ್ಣ ತನಿಖೆ, KREIS ಸಂಸ್ಥೆಯ ಎಲ್ಲಾ ಕಾಮಗಾರಿಗಳು ಮತ್ತು ಅಧಿಕಾರಿಗಳ ಆಸ್ತಿ ವಿವರಗಳ ಸಮಗ್ರ ಪರಿಶೀಲನೆ ನಡೆಯಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬರುತ್ತಿದೆ.
ಮುಂದೇನು?
ಲೋಕಾಯುಕ್ತ ತನಿಖೆ ಯಾವ ಹಂತಕ್ಕೆ ತಲುಪುತ್ತದೆ?
ಇನ್ನೆಷ್ಟು ಹೆಸರುಗಳು ಹೊರಬರುತ್ತವೆ?
ಭ್ರಷ್ಟರಿಗೆ ಶಿಕ್ಷೆಯಾಗುತ್ತದೆಯೇ?
ಇವೆಲ್ಲ ಪ್ರಶ್ನೆಗಳ ಉತ್ತರಕ್ಕಾಗಿ ರಾಜ್ಯದ ಜನರು ಕಾದು ನೋಡುತ್ತಿದ್ದಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ