ಭಾರತೀಯ ಸಂಸ್ಕೃತಿ,ನಾಡು ನುಡಿ ರಕ್ಷಣೆಯೊಂದಿಗೆ ನಮ್ಮ ಜನಾಂಗದ ಉನ್ನತಿಯೂ ಮುಖ್ಯವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ನಮ್ಮ ಸಮುದಾಯದ ಕೊಡುಗೆ ಅಪಾರ ಹಾಗೂ ಗಮನಾರ್ಹವಾದದ್ದು.ಈ ಬಾರಿಯ ಚುನಾವಣೆಯಲ್ಲೂ ವಿವಿಧ ಪಕ್ಷಗಳಿಂದ ನಮ್ಮ ಸಮುದಾಯದ ಬಂದುಗಳು ಜಯಗಳಿಸಿ ಶಾಸಕರಾಗಿದ್ದಾರೆ,ಸಚಿವರಾಗಿದ್ದಾರೆ.ಪ್ರಸ್ತುತ ಇರುವ ಲೋಕಸಭೆಯಲ್ಲಿ ಹಲವು ಮಂದಿ ಸಂಸದರಾಗಿದ್ದಾರೆ,ಕೇಂದ್ರ ಸಚಿವರಾಗಿರುವ ಹೆಮ್ಮೆಯ ಸಂಗತಿ ಹಾಗೂ ಇವರುಗಳನ್ನು ಅಭಿನಂದಿಸುವ,ಗೌರವಿಸುವ ಜವಾಬ್ದಾರಿ ನಮ್ಮದು ಆ ಹಿನ್ನಲೆಯಲ್ಲಿ ದಿನಾಂಕ 5/7/23ರ ಬುಧವಾರ ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಶಾಸಕ,ಸಂಸದ,ಸಚಿವರ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳಾದ ಪರಮ ಪೂಜ್ಯ ಶ್ರೀ. ಶ್ರೀ. ಶ್ರೀ.ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಿಕೊಂಡು ಆಶೀರ್ವದಿಸಲಿದ್ದಾರೆ.
ನಾಡಿನ ವಿವಿಧ ಮಠಗಳ ಪೂಜ್ಯರುಗಳು,ಗಣ್ಯರು ಭಾಗವಹಿಸುವ ಈ ಕಾರ್ಯಕ್ರಮಕ್ಕೆ ವೀರಶೈವ ಲಿಂಗಾಯತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕಾಗಿ ಪ್ರಾರ್ಥನೆ. ಮಾನ್ಯ ಮಾದ್ಯಮ ಮಿತ್ರರುಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಚಾರ ನೀಡುವುದರೊಂದಿಗೆ ಸಮುದಾಯದ ಬೆಳವಣಿಗೆಗೆ ಸಹಕರಿಸಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ವೀರಭದ್ರಪ್ಪ ಅಂಗಡಿ ತಾಲ್ಲೂಕು ಅಧ್ಯಕ್ಷರು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಸ್ಕಿ.













