ಬಂದಿತು ಕಡು ಬೇಸಿಗೆ ಹಾರಾಡುವ ಬಾನಾಡಿಗೆ
ಕಟ್ಟುವ ಅರವಟ್ಟಿಗೆ ಗಿಡಕ್ಕೆರಡು ಅರವಟ್ಟಿಗೆ
ಬಾನಾಡಿಗಳಿಗೆ ಸಂಜೀವಿನಿಯ ತೊಟ್ಟಿಲು
ಏಪ್ರಿಲ್ ಫೂಲ್ ಬೇಡ ಏಪ್ರಿಲ್ ಕೂಲ್ ಆಗಲಿ
ಒಬ್ಬೊಬ್ಬ ಯುವಕ ಆರತಿಗೊಂದು ಕಿರತಿಗೊಂದು
ಮರಗಳ ಪಡೆದು ಕಟ್ಟಲಿ ಅರವಟ್ಟಿಗೆ
ಉಳಿಯಲಿ ಬಾನಾಡಿಗಳು ಅದುವೇ ಪಕ್ಷಿಗಳಿಗೆ
ದಿವ್ಯ ಸಂಜೀವಿನಿ ಕಟ್ಟೋಣ ಊರಿಗೊಂದು
ವನಸಿರಿ ಅದುವೇ ಬಾಳಿಗೆ ಅಮರ ಸಿರಿ
ಬಂದಿತು ಕಡು ಬೇಸಿಗೆ ಗಿಡ-ಮರಗಳಲ್ಲಿ
ನಿರ್ಮಿಸುವ ಅರವಟ್ಟಿಗೆ ಜೀವಿಗಳ ದಾಹ ತಣಿಯಲಿ
ಅನಾಥ ಕಂದ (ಆರ್.ಕೆ)
ಕೆ.ರಮೇಶ.ಹೊಸಳ್ಳಿ
ಸಹಾಯಕ ಅಭಿವೃದ್ದಿ ಅಧಿಕಾರಿ
ಡಿ.ಬಿ.ಸಿ.ಡಿ.ಸಿ ರಾಯಚೂರು)














