ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಬಂಗಾರ ದುಬಾರಿ: ಬಡ–ಮಧ್ಯಮ ವರ್ಗದ ಕನಸಿಗೆ ಬೀಗ

Advertisement
ಜನವರಿ 27
ಒಂದು ಕಾಲದಲ್ಲಿ ಬಂಗಾರ ಎಂಬುದು ಪ್ರತಿಯೊಂದು ಕುಟುಂಬದ ಗೌರವ, ಭದ್ರತೆ ಮತ್ತು ಭವಿಷ್ಯದ ಆಸರೆಯಾಗಿತ್ತು. ಇಂದು ಅದೇ ಬಂಗಾರ ಸಾಮಾನ್ಯ ಜನರಿಗೆ ಕೈಗೆಟುಕದ ವಸ್ತುವಾಗಿ ಬದಲಾಗುತ್ತಿದೆ. 2025ರಿಂದ ಇಂದಿನವರೆಗೂ ಬಂಗಾರದ ಬೆಲೆಯಲ್ಲಿ ಆಗಿರುವ ಅತಿಯಾದ ಏರಿಕೆ, ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕಿನ ಮೇಲೆಯೇ ನೇರವಾಗಿ ಪ್ರಹಾರ ಮಾಡುತ್ತಿದೆ.

ಉಳ್ಳವರು ಮತ್ತು ದೊಡ್ಡ ಹೂಡಿಕೆದಾರರು ಬಂಗಾರದ ಬೆಲೆ ಏರಿಕೆಯಿಂದ ಕೋಟಿ–ಲಕ್ಷಗಳ ಲಾಭ ಎಣಿಸುತ್ತಿದ್ದರೆ, ದಿನಗೂಲಿ ಕಾರ್ಮಿಕ, ರೈತ, ಸಣ್ಣ ಉದ್ಯೋಗಿಗಳು ಮಾತ್ರ ಸಾಲದ ಹೊರೆಯಲ್ಲಿ ಮುಳುಗುತ್ತಿದ್ದಾರೆ. ಮದುವೆ, ನಾಮಕರಣ, ಗೃಹಪ್ರವೇಶದಂತಹ ಸಾಮಾಜಿಕ ಸಂಪ್ರದಾಯಗಳಿಗೆ ಕನಿಷ್ಠ ಬಂಗಾರ ಖರೀದಿಸುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಇದು ಕೇವಲ ಖರೀದಿ ಸಮಸ್ಯೆಯಲ್ಲ; ಇದು ಸಮಾಜದ ಆರ್ಥಿಕ ಅಸಮಾನತೆಯ ಸ್ಪಷ್ಟ ಸೂಚನೆ.

ಇಂದು ಹತ್ತು ಗ್ರಾಂ ಬಂಗಾರದ ಬೆಲೆ ಒಂದು ಲಕ್ಷ 50 ಸಾವಿರದಿಂದ ಒಂದು ಲಕ್ಷ 65 ಸಾವಿರ ರೂಪಾಯಿವರೆಗೆ ಏರಿಕೆಯಾಗಿದೆ. ಈ ದರವನ್ನು ನೋಡಿದರೆ ಸಾಮಾನ್ಯ ಕುಟುಂಬಗಳು ಬಂಗಾರದ ಅಂಗಡಿಗಳ ಕಡೆಗೂ ಮುಖಮಾಡಲು ಹೆದರುವಂತಾಗಿದೆ. ಸಾಲ ಮಾಡಿಕೊಂಡು ಬಂಗಾರ ತಂದರೂ ಕಳ್ಳರ ಭಯ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಂಗಾರ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಸುದ್ದಿಯಾಗುತ್ತಿರುವುದು ಜನರ ಮನಸ್ಸಿಗೆ ಬೆಂಕಿ ಹಚ್ಚಿದಂತಾಗಿದೆ.

ಬಂಗಾರದ ದುಬಾರಿ ಬೆಲೆ ನಮ್ಮ ಸಂಪ್ರದಾಯಗಳನ್ನೇ ಪ್ರಶ್ನೆಗೆ ಒಳಪಡಿಸಿದೆ. ಬಂಗಾರ ಇಲ್ಲದ ಮದುವೆ, ಸರಳ ಸಮಾರಂಭಗಳು ಈಗ ಅನಿವಾರ್ಯವಾಗುತ್ತಿವೆ. ಇದು ಬಡತನದ ಆಯ್ಕೆಯಲ್ಲ; ದುಬಾರಿ ವ್ಯವಸ್ಥೆಯ ಒತ್ತಡ. ಸರ್ಕಾರ ಮತ್ತು ಆರ್ಥಿಕ ನೀತಿ ರೂಪಿಸುವವರು ಈ ವಾಸ್ತವವನ್ನು ಗಮನಿಸದೇ ಹೋದರೆ, ಮಧ್ಯಮ ವರ್ಗದ ಅಸಮಾಧಾನ ಮುಂದಿನ ದಿನಗಳಲ್ಲಿ ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

ಬಂಗಾರ ಕೇವಲ ಹೂಡಿಕೆ ವಸ್ತುವಲ್ಲ; ಅದು ಜನಸಾಮಾನ್ಯರ ಭಾವನೆ. ಆ ಭಾವನೆಗೆ ಬೆಲೆ ಏರಿಕೆಯ ಹೆಸರಿನಲ್ಲಿ ಬೀಗ ಹಾಕಬಾರದು. ಬಂಗಾರದ ಮಾರುಕಟ್ಟೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಗಂಭೀರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬಂಗಾರ ಎಂದರೆ ಶ್ರೀಮಂತರ ಆಸ್ತಿ, ಬಡವರ ಕನಸು ಎಂಬ ಅಂತರ ಇನ್ನಷ್ಟು ಅಗಾಧವಾಗಲಿದೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್