ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಮತದಾನ ಜಾಗೃತ ಅಭಿಯಾನ

Advertisement
ಮೇ 3 ಸಿಂಧನೂರು ನಗರದ ನೊಬೆಲ್ ಪದವಿ ಮಹಾ ವಿದ್ಯಾಲಯ ಎನ್ಎಸ್ಎಸ್ ಘಟಕ ಸಿಂಧನೂರು  ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು , ಈ ಕಾರ್ಯಕ್ರಮವನ್ನು ಪತ್ರಿಕೆ ಪ್ರಧಾನ ಸಂಪಾದಕರು ಡಿ ಎಚ್ ಕಂಬಳಿ ಸರ್ ಅವರು ಚಾಲನೆ ನೀಡಿ ಎನ್ಎಸ್ಎಸ್ ಎಂದರೆ ಉಪಕಾರ ಮಾಡುವುದು ಹೊರತು ಪ್ರತಿ ಉಪಕಾರ ಬಯಸುವುದಿಲ್ಲ. ಮತದಾನ ಎನ್ನುವುದು ಸೌಂದರ್ಯ ರಾಷ್ಟ್ರವನ್ನು ನಿರ್ಮಾಣ ಮಾಡುವ ಶಕ್ತಿ ಅದಕ್ಕಿದೆ, ಸುವ್ಯವಸ್ಥಿತ ರಾಷ್ಟ್ರವನ್ನು ನಿರ್ಮಾಣ ಮಾಡುವಂತಹ ಶಕ್ತಿ ಮತದಾನಕ್ಕೆ ಇದೆ ಆದ್ದರಿಂದ ನೀವು ಸೂಕ್ತ ವ್ಯಕ್ತಿಗೆ ಮತದಾನ ಮಾಡಿ ಎಂದು ಮಾತನಾಡಿದರು.



ಪ್ರಾಸ್ತಾವಿಕವಾಗಿ ಮಾತನಾಡಿದ ನೋಬೆಲ್ ಪದವಿ ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ಡಾ. ಅರುಣ ಕುಮಾರ ಬೆರ್ಗಿ ಯವರು ಮತದಾನ ಅತ್ಯಮೂಲ್ಯವಾದದ್ದು ಅದನ್ನು ದೇಶದ ಒಳ್ಳೆ ಬದಲಾವಣೆಗಾಗಿ ಬಳಸಿಕೊಳ್ಳಿ, ಯಾವುದೇ ಹಣ ಹೆಂಡ ಆಮಿಷಕ್ಕೆ ಹಾಗೂ ಜಾತಿ ಧರ್ಮ ಎಂದು ಲೆಕ್ಕಿಸದೆ ದೇಶದ ಬದಲಾವಣೆಗಾಗಿ ನಿಮ್ಮ ಮತವನ್ನು ಚಲಾಯಿಸಿ ಎಂದು ಜಾಗೃತಿ ಮೂಡಿಸಿದರು

ಅದೇ ರೀತಿಯಾಗಿ ಪ್ರಾಂಶುಪಾಲರಾದ ಆನಂದ ದುಮ್ಮತಿ ರವರು ಹಿಂದಿನ ಕಾಲದ ರಾಜ ಮನೆತನದ ಕೇಂದ್ರೀಕೃತ ಆಡಳಿತವನ್ನು ತೊಲಗಿಸಿ ಡಾ. ಭೀಮರಾವ್ ಅಂಬೇಡ್ಕರ್ ಹೇಳಿರುವಂತೆ ಸಂವಿಧಾನ ಬದ್ಧವಾಗಿ ಮತವನ್ನು ಚಲಾಯಿಸುವದರ ಮುಖಾಂತರ ಪ್ರಜಾಪ್ರಭುತ್ವ ಸರ್ಕಾರವನ್ನು ನಿರ್ಮಾಣ ಮಾಡೋಣ ಎಂದು ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಮೂಡಿಸಿದರು.

[video width="1920" height="1080" mp4="https://badavarabarkolu.com/wp-content/uploads/2023/05/video_20230503_104235.mp4"][/video]



 

ಎಸ್ ಎನ್ಎಸ್ಎಸ್ ಸಂಯೋಜನ ಅಧಿಕಾರಿಗಳು ಹೊನ್ನಪ್ಪ ಬೆಳಗುರ್ಕಿ ನಿಮ್ಮ ಅಮೂಲ್ಯವಾದ ಮತವನ್ನು ದೇಶದ ಹಿತವನ್ನು ಕಾಪಾಡುವ ಸೂಕ್ತ ವ್ಯಕ್ತಿಗೆ ಹಾಕಿ ಎಂದು ಮನದಟ್ಟು ಮಾಡಿದರು. ಈ  ಜಾಗೃತಿ ಆಂದೋಲನ ನಮ್ಮ ಕಾಲೇಜಿನಿಂದ ಆರಂಭವಾಗಿ ಆದರ್ಶ ಕಾಲೋನಿ ಮಾರ್ಗವಾಗಿ ಸಿಂಧನೂರಿನ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮತದಾನದ ನಿಮ್ಮ ಮತ ದೇಶಕ್ಕೆ ಹಿತ, ಸಾಕು ಜಾತಿ ಮತ ಹಾಕು ಒಂದೇ ಮತ, ಮೇ ಹತ್ತರಂದು ಕಡ್ಡಾಯವಾಗಿ ಮತದಾನ ಮಾಡಿ,ಮತದಾನ ಚಲಾಯಿಸಿ, ದೇಶದ ಏಕತೆಗಾಗಿ ಕೈಜೋಡಿಸಿ ಎಂಬ ಘೋಷಣೆಗಳನ್ನು ಕೂಗುವುದರ ಮೂಲಕ  ಜನಜಾಗೃತಿ ಮೂಡಿಸಲಾಯಿತು. ನೋಬೆಲ್ ಪದವಿ ಮಹಾವಿದ್ಯಾಲಯದ ಖಜಾಂಚಿಗಳಾದ ಜಯಪ್ಪ ಗೊರೇಬಾಳ ಉಪನ್ಯಾಸಕರಾದ ಸಣ್ಣ ಯಲ್ಲಪ್ಪ ಸಾಸಲಮರಿ, ಶಿವರಾಜ್ ಜಾಲವಾಡಿಗೆ, ಬಸವರಾಜ ದೇವಿಪುರ ಹಾಗೂ ನಾಗರಾಜ  ಭಾಗವಹಿಸಿ ಮತದಾನ ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ