ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಮೇ.೧೦ರ ಸಾರ್ವತ್ರಿಕ ಮತದಾನಕ್ಕೆ ಸಕಲ ಸಿದ್ದತೆ

Advertisement
ಸಿರುಗುಪ್ಪ : ಮೇ.೮ರ ಸಂಜೆ ೬ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಪಕ್ಷದ ಪ್ರಚಾರಕ್ಕೆ ಬಂದ ಮುಖಂಡರಾಗಲೀ, ಸ್ಟಾರ್ ಕ್ಯಾಂಪೇನ್‌ಗಳಾಗಲೀ ವಾಸ್ತವ್ಯ ಹೂಡುವಾಗಿಲ್ಲ ಹಾಗೂ ಮುಂದಿನ ೪೮ಗಂಟೆಗಳ ಕಾಲ ಜಿಲ್ಲಾಧಿಕಾರಿಗಳು ಸೆಕ್ಷನ್ ೧೪೪ ಜಾರಿ ಮಾಡಲಿದ್ದು, ೫ಕ್ಕಿಂತ ಹೆಚ್ಚಿನ ಜನ ಗುಂಪು ಸೇರುವಾಗಿಲ್ಲವೆಂದು ಚುನಾವಣಾಧಿಕಾರಿ ಸತೀಶ್.ಹೆಚ್.ಕೆ. ತಿಳಿಸಿದ್ದಾರೆ.

ನಗರದ ತಾಲೂಕು ಕಛೇರಿಯಲ್ಲಿ ಮೇ.೧೦, ಬುಧವಾರದಂದು ನಡೆಯುವ ಸಾರ್ವತ್ರಿಕ ಮತದಾನ ಅಂಗವಾಗಿ ಚುನಾವಣಾ ಆಯೋಗದಿಂದ ಕೈಗೊಂಡಿರುವ ಸಕಲ ಸಿದ್ದತೆಯ ಕುರಿತು ಅವರು ಸುದ್ದಿಗೋಷ್ಠಿ ನಡೆಸಿದ ಅವರು ಮೇ.೯ರಂದು ಚುನಾವಣೆ ಸಿಬ್ಬಂದಿಗಳು ಆಗಮಿಸಲಿದ್ದು ೨೨೭ ಮತಗಟ್ಟೆಗಳಿಗೆ ಸಂಬಂದಿಸಿದ ಇವಿಎಂ. ಇನ್ನಿತರ ಸಾಮಗ್ರಿಗಳನ್ನು ಒಪ್ಪಿಸಿ ೬೦ ಮಾರ್ಗಗಳಿಂದ ಬಸ್ಸು ಮತ್ತು ಟ್ರಾಕ್ಸಿಗಳ ಮೂಲಕ ಮತಗಟ್ಟೆಗಳಿಗೆ ತಲುಪಿಸಲಾಗುವುದು.

ಗಡಿಭಾಗದಲ್ಲಿನ ಸೂಕ್ಷಂ ಮತ್ತು ಅತಿಸೂಕ್ಷಂ ವಿರುವ ೧೧೩ ಮತಗಟ್ಟೆಗಳಲ್ಲಿನ ಪ್ರಕ್ರಿಯೆಗಳನ್ನು ವೆಬ್‌ಕ್ಯಾಸ್ಟಿಂಗ್ ಮೂಲಕ ಕಛೇರಿಯಲ್ಲೇ ಕುಳಿತು ವೀಕ್ಷಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಮತಗಟ್ಟೆಗಳಿಗೆ ಅವಶ್ಯಕವಾದ ೨೨೭ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಡ್‌ಗಳಲ್ಲದೇ ರಿಸರ್ವ್ ಆಗಿ ಬ್ಯಾಲೆಟ್ ಮತ್ತು ಕಂಟ್ರೋಲ್ ಯುನಿಟ್ ೪೯ ಇದ್ದರೆ ವಿ.ವಿ.ಪ್ಯಾಡ್ ೭೧ ರಿಸರ್ವ್ ಇಡಲಾಗಿದೆ.

ಕಡ್ಡಾಯ ಮತದಾನಕ್ಕಾಗಿ ಮತದಾರರಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ, ಶುದ್ದ ಕುಡಿಯುವ ನೀರು, ಕೊಠಡಿ ವ್ಯವಸ್ಥೆಯಿಲ್ಲದ ಕಡೆ ಶಾಮಿಯಾನ ಕುರ್ಚಿ ವ್ಯವಸ್ಥೆ ಕಲ್ಪಿಸಲಾಗಿದ್ದು ಈ ಸಲ ಶೇ.೮೫ರ ಗುರಿಯನ್ನು ಹೊಂದಲಾಗಿದೆಂದು ತಿಳಿಸಿದರು.

ಇದೇ ವೇಳೆ ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ತೆಕ್ಕಲಕೋಟೆ ಸಿಪಿಐ ಸುಂದ್ರೇಶ್ ಹೊಳೆಣ್ಣನವರ್ ಇದ್ದರು
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ