ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ರೇಕಲಮರಡಿ ಗ್ರಾಮದಲ್ಲಿ ವಾಂತಿ ಬೇದಿ ಪ್ರಕರಣ: ಜಿಲ್ಲಾಡಳಿತದಿಂದ ಸೂಕ್ತ ಕ್ರಮ

ರಾಯಚೂರು,ಮೇ 29ದೇವದುರ್ಗ ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೇಕಲಮರಡಿ ಗ್ರಾಮದಲ್ಲಿ ಮೇ 25ರಂದು 10, ಮೇ ೨೬ರಂದು 15 ಹಾಗೂ ಮೇ27ರಂದು 9 ಜನರಲ್ಲಿ ವಾಂತಿ ಬೇದಿ ಪ್ರಕರಣಗಳು ಕಂಡುಬಂದಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ 6, ಅರಕೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ 9 ಹಾಗೂ ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ಸೇರಿದಂತೆ ಒಟ್ಟು 18 ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ 18 ರೋಗಿಗಳು ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದುಹೋಗಿ ಕಲುಷಿತ ನೀರು ಸೇವನೆ ಮಾಡಿದ್ದ ಪರಿಣಾಮವಾಗಿ 34 ಜನ ಅಸ್ವಸ್ಥಗೊಂಡಿದ್ದಾರೆ. ಜೊತೆಗೆ ೫ವರ್ಷದ ಹನುಮೇಶ ಎಂಬ ಬಾಲಕ ಸಾವನಪ್ಪಿದ್ದು, ಆರೋಗ್ಯ, ಕಂದಾಯ ಹಾಗೂ ಗ್ರಾಮೀನ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಮೇ27 ರಂದು ಸಂಪುಟ ಸಚಿವರಾದ ಎನ್.ಎಸ್ ಬೋಸರಾಜು ಹಾಗೂ ಮೇ28ರಂದು ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳಿಗೆ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರಿನಿಂದ ಆದ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದು ಆರೋಗ್ಯ ಇಲಾಖೆಯಿಂದ ಅಸ್ವಸ್ಥಗೊಂಡವರಿಗೆ ಸೂಕ್ತ ವೈದ್ಯಕೀಯ ಉಪಚಾರ ಮಾಡುವಂತೆ ಹಾಗೂ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ.

ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರವನ್ನು ತೆಗೆದು ವೈದ್ಯರು ಮತ್ತು ವೈದ್ಯೇತರ ಸಿಬ್ಬಂದಿಗಳನ್ನು ನಿಯೋಜಿಸಿ ಗ್ರಾಮಕ್ಕೆ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಾಮಕ್ಕೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವ್ಥೆಯನ್ನು ಮಾಡಲಾಗಿದೆ.

ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಇಲಾಖೆಯಿಂದ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗಿದೆ. ಮತ್ತು ಓಆರ್‌ಎಸ್ ಪೊಟ್ಟಣಗಳನ್ನು ವಿತರಿಸಲಾಗಿದೆ. ಮತ್ತು ಗ್ರಾಮಸಲ್ಲಿ ಡಂಗೂರ ಸಾರುವ ಮೂಲಕ ಕುದಿಸಿ ಆರಿಸಿದ ನೀರನ್ನು ಸೇವಿಸುವಂತೆ ತಿಳಿಸಲಾಗಿದೆ.

ಒಡೆದ ಪೈಪ್‌ಲೈನ್‌ಗಳನ್ನು ತೆರವುಗೊಳಿಸಿ ಹೊಸ ಪೈಪ್ ಲೈನ್ ಅಳವಡಿಸಲು ಕ್ರಮ ಜರುಗಿಸಲಾಗಿದೆ. ಕುಡಿಯುವ ನೀರಿನ ಮೇಲ್ತೊಟ್ಟಿ ಸ್ವಚ್ಛತೆ ಮತ್ತು ಗ್ರಾಮದಲ್ಲಿ ಸ್ವಚ್ಛತೆಯ ಕುರಿತು ಗ್ರಾಮ ಪಂಚಾಯತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನಿಷ್ಕಿçÃಯವಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಮರುಪ್ರಾರಂಭಿಸಲಾಗಿದ್ದು, ಇದರಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಮೃತರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಲು ಕಂದಾಯ ಇಲಾಕೆಯಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಹಾಗೂ ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ ತೋರಿಸ ಜಾಗೀರಜಾಡಲದಿನ್ನಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಯನ್ನು ಅಮಾನತ್ತುಗೊಳಿಸಿ ಸೂಕ್ತ ಕ್ರಮ ಜರುಗಿಸಲಾಗಿದೆ.

ಗೋರೆಬಾಳ ಗ್ರಾಮದಲ್ಲಿ ವಾಂತಿ ಬೇದಿ ಪ್ರಕರಣಗಳ ಹತೋಟಿಗೆ ಕ್ರಮ: ಲಿಂಗಸುಗೂರು ತಾಲೂಕಿನ ಗೋರೆಬಾಳ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕಳೆದ ಮೂರು ದಿನಗಳಲ್ಲಿ ವಿಷಪೂರಿತ ಆಹಾರ ಮತ್ತು ಕಲುಷಿತ ಕುಡಿಯುವ ನೀರಿನ ಸೇವನೆಯಿಂದ ಸಂಭವಿಸಿದೆ ಎನ್ನಲಾದ ಒಟ್ಟು ೨೫ ವಾಂತಿ ಬೇದಿ ಪ್ರಕರಣಗಳ ಕುರಿತು ಪರೀಶೀಲನೆ ನಡೆಸಲಾಗಿದ್ದು, ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಈಗಾಗಲೇ 10 ರೋಗಿಗಳನ್ನು ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾಡಳಿತದಿಂದ ಸಾರ್ವಜನಿಕರಲ್ಲಿ ಮನವಿ: ಬೇಸಿಗೆಯಲ್ಲಿ ನಿರ್ಜಲೀಕರಣಕ್ಕೆ ಒಳಗಾಗದಂತೆ ಮುನ್ನೆಷ್ಷರಿಕೆ ವಹಿಸಿಕೊಳ್ಳಬೇಕು, ಬಿಸಿಲಿನ ತಾಪಮಾನಕ್ಕೆ ಒಳಗಾಗಿ ಅನಾರೋಗ್ಯಕ್ಕೆ ಒಳಗಾದವರು ಹತ್ತಿರದ ಆರೋಗ್ಯ ಕೇಂದ್ರದ ವೈದ್ಯರ ಸಲಹೆಯ ಮೇರೆಗೆ ಕ್ರಮ ಜರುಗಿಸಬೇಕು.

ವಾಂತಿ ಬೇದಿ ಕಂಡುಬಂದಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ್ನು ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೆ ಸೇವನೆ ಮಾಡತಕ್ಕದ್ದು,ಹೊಲಗದೆ ನಾಲ ಹಾಗೂ ಬಾವಿಗಳಲ್ಲಿ ನಿಂತಿರುವ ಅಶುದ್ಧ ನೀರನ್ನು ಸೇವನೆ ಮಾಡಬಾರದು,ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರಿಂದ ವಿತರಿಸಲಾದ ಓಆರ್‌ಎಸ್ ಪಟ್ಟಣಗಳನ್ನು ಅವಶ್ಯಕತೆಗನುಗುಣವಾಗಿ ಸೇವನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
 ಸಿಂಧನೂರಿನ ಯುವಕ ಕಾಣೆಯಾದ ಪ್ರಕರಣ: ಪೋಷಕರ ಕಣ್ಣೀರಿನ ಮನವಿಸುಳ್ಳು ದೂರುಗಳಿಗೆ ಕಡಿವಾಣ: 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್ಭ್ರೂಣಲಿಂಗ ಪತ್ತೆ–ಹತ್ಯೆ ಪ್ರಕರಣ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಜೈಲು ಪಾಲು“50 ವರ್ಷಗಳ ಬದುಕಿಗೆ 15 ದಿನಗಳ ಗಡುವು: ಗಾಂಧಿನಗರದ 80 ಬಡ ಕುಟುಂಬಗಳ ಮೇಲೆ ಜೆಸಿಬಿ ನೆರಳು!”ಪೊಲೀಸ್ ಪೇದೆ ಮದುವೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ – ಮಾನವೀಯತೆಗೆ ಮಾದರಿ ಘಟನೆನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತ!ಬರುವ ದಿನಗಳು ಅಶಾಂತಿ ಸೂಚನೆ – ಅನ್ನ ನೀರಿಗೆ ಆಹಾಕಾರ: ಕೋಡಿಮಠ ಸ್ವಾಮೀಜಿ ಭವಿಷ್ಯಚಲಿಸುತ್ತಿದ್ದ ಬಸ್ ಏಕಾಏಕಿ ಜಮೀನಿಗೆ ನುಗ್ಗಿದ ಘಟನೆ – ನೂರಕ್ಕೂ ಹೆಚ್ಚು ಪ್ರಯಾಣಿಕರು ಪಾರು!ಕಲಮಂಗಿ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ – ವಿದ್ಯಾರ್ಥಿಗಳ ಭರ್ಜರಿ ಸಾಧನೆ“ಬಿಸಿಲಿನ ಅಬ್ಬರ: ಕರ್ನಾಟಕಲ್ಲಿ ಲಾಕ್‌ಡೌನ್ ಬರುತ್ತಾ..?”625ಕ್ಕೆ 625: ರಾಯಚೂರು ಸುಖದೇವ್ ಸಾಧನೆಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ80 ಅಡಿ ಕೆಳಗೆ ನೀರು: ಪೈದೊಡ್ಡಿ ವೃದ್ಧನ ಗೋಳು ಕೇಳುವರು ಯಾರು “ಪುರಾಣದ ಬಸವಣ್ಣ ಅಲ್ಲ — ಸಮಾಜ ಬದಲಿಸಿದ ಮನುಷ್ಯ ಬಸವಣ್ಣ”