ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಚಿವ ಸಂಪುಟದಲ್ಲಿ ಶ್ರೀಯುತ ಪುಟ್ಟರಂಗ ಶೆಟ್ಟಿ ಯವರಿಗೆ ಸಚಿವ ಸ್ಥಾನವು ನೀಡದಿರುವ ಬಗ್ಗೆ ಮನವಿ.

Advertisement
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ಮಾಡಿಕೊಳ್ಳುವುದೇನೆಂದರೆ, ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರ ಸಚಿವ ಸಂಪುಟ ರಚನೆಯಲ್ಲಿ ಸಂಭಾವನೆ ಪಟ್ಟಿಯಲ್ಲಿ ಚಾಮರಾಜನಗರದ ಶಾಸಕರಾದ ಶ್ರೀಯುತ ಪುಟ್ಟರಂಗಶೆಟ್ಟಿಯವರ ಹೆಸರಿರುವುದಾಗಿ ಮಾಧ್ಯಮದಲ್ಲಿ ಪ್ರಕಟಿಸಿರುತ್ತಾರೆ. ಆದರೆ ಕೊನೆಯ ಘಳಿಗೆಯಲ್ಲಿ ಅಂತಿಮವಾಗಿ ಪ್ರಕಟಿಸಿದ ಮಂತ್ರಿಗಳ ಪಟ್ಟಿಯಲ್ಲಿ ಶ್ರೀಯುತರ ಹೆಸರನ್ನು ಸಚಿವ ಸ್ಥಾನದಿಂದ ವಂಚನೆ ಮಾಡಿದ್ದು ದುರಾದೃಷ್ಟಕರ ವಿಷಯವಾಗಿದೆ.

ಈ ವಿಷಯದಲ್ಲಿ ನಮ್ಮ ಸಮಾಜದವರು ಹೇಳಬಯಸುವುದೇನೆಂದರೆ ಕರ್ನಾಟಕ ರಾಜ್ಯದಲ್ಲಿ ಉಪ್ಪಾರ ಸಮಾಜದ ೩೫ ಲಕ್ಷ ಜನರಿದ್ದು, ೨೫ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಮತದಾರರಾಗಿದ್ದಾರೆ. ನಮ್ಮ ಸಮಾಜದಿಂದ ಕೆಲವು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಉಪ್ಪಾರ ಸಮಾಜದ ಏಕೈಕ ಶಾಸಕ ಹಾಗೂ ೪ ಭಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡದಿರುವುದು ಸಮಾಜವನ್ನು ಕಡೆಗಣಿಸಿದ್ದು ಕಂಡುಬರುತ್ತಿದೆ.



ಸತತವಾಗಿ 4 ಬಾರಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಶಾಸಕರಾಗಿ ಆಯ್ಕೆಯಾಗಿದ್ದು ಹಾಗೂ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಸಮಾಜದವರ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಎಂತಹ ಪರಿಸ್ಥತಿಯಲ್ಲಿ ಪಕ್ಷವನ್ನು ಬಿಡದೇ ಪಕ್ಷದ ಶಾಸಕರ ಗೆಲುವಿಗಾಗಿ ಮುಖ್ಯ ಪಾತ್ರವನ್ನು ವಹಿಸಿರುತ್ತಾರೆ. ಇದಕ್ಕೆ ಮೂಲ ಕಾರಣ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಾಗಬೇಕೆಂಬ ಒಂದೇ ಒಂದು ಹಂಬಲದಿಂದ ಮತ್ತು

 

ಆದರೆ ದುರಂತವೆಂದರೆ ಕಾಂಗ್ರೆಸ್ಸಿನ ಉನ್ನತಿಯನ್ನ ಬಯಸುವ ನಾವು ನಮ್ಮ ಸಮಾಜದ ಏಕೈಕ ಶಾಸಕರಾದ ಶ್ರೀಯುತ ಪುಟ್ಟರಂಗಶೆಟ್ಟಿಯವರಿಗೆ ಮುಖ್ಯಮಂತ್ರಿಗಳು ಸಚಿವ ಸ್ಥಾನವನ್ನು ನೀಡೇ ನೀಡುತ್ತಾರೆಂಬ ಆಶಯದಿಂದ್ದೆವು.

ಆದರೆ ನಮ್ಮ ಆಸೆಗೆ ಭಂಗ ಮಾಡಿ ನಮ್ಮ ಸಮಾಜವನ್ನು ಕಡೆಗಣಿಸಿರುವುದಕ್ಕೆ ಸಮಾಜದವರಿಗೆ ತುಂಬಾ ನೋವುಂಟಾಗಿದೆ. ಪ್ರಯುಕ್ತ ಇವರಿಗೆ ಮಂತ್ರಿ ಪದವಿಯನ್ನು ನೀಡಿ ನಮ್ಮ ಸಮಾಜಕ್ಕೆ ಪ್ರಾಮುಖ್ಯತೆ ನೀಡುವಂತೆ ವಿನಂತಿಸುತ್ತೇವೆ.

ಶ್ರೀಯುತ ಸಿದ್ಧರಾಮಯ್ಯನವರ ಆಪ್ತರೆಂದೇ ಗುರುತಿಸಿಕೊಂಡಿರುವ ನಮ್ಮ ಶಾಸಕರ ಹೆಸರು ಸಂಭವನೀಯ ಪಟ್ಟಿಯಲ್ಲಿ ಇತ್ತು ಆದರೆ ಕೊನೆ ಗಳಿಗೆಯಲ್ಲಿ ಕೈ ತಪ್ಪಿರುವುದು ನಮ್ಮ ಸಮಾಜಕ್ಕೆ ನಿರಾಸೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿಗಮ ಮಂಡಳಿಯಲ್ಲಿ ಕನಿಷ್ಠ ೩ ಜನ ನಮ್ಮ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಸ್ಥಾನ ನೀಡಬೇಕು, ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು, ಉಪ್ಪಾರ ಸಮಾಜ ಅಬಿವೃದ್ಧಿಗೆ 200ಕೋಟಿ ರೂ. ಅನುದಾನ ಒದಗಿಸಬೇಕು, ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ವಿಶೆಷ ಅನುದಾನ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಮಾಡುವುದರ ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಯು.ವೆಂಕೋಬ, ಮದ್ದಿಕೇರಿ ಈರಣ್ಣ, ಗಧಾರ ನರಸರೆಡ್ಡಿ, ಭೀಮಯ್ಯ ಬುದ್ದಿನ್ನಿ, ಜಂಬಲದಿನ್ನಿ ನರಸಿಂಹಲು, ಆಶಾಪುರ ಹನುಮಂತಪ್ಪ, ನವಲಕಲ್ ಶ್ರೀನಿವಾಸ, ದೇವನಪಲ್ಲಿ ನಾರಾಯಣ, ಎಂ. ಚಂದ್ರಮೌಳಿ, ದೇವನಪಲ್ಲಿ ರಾಮಪ್ಪ, ನವೀನ ಕುಮಾರ, ರಂಗನಾಥ, ಅಮರೇಶ ಸಾಗರ, ಸಂತೋಷ ಸಾಗರ, ಪಿ. ಸುರೇಖಾ, ಬಿ.ಮಾಲತಿ, ಆದಿಲಕ್ಷ್ಮಿ, ಮಂಜುಳಾ, ಗ್ರಾಮಸ್ಥರು ಹಾಗೂ ನವ ಯುವಕ ಪದಾಧಿಕಾರಿಗಳು ಮಿರ್ಜಾಪುರು, ಇಡಪನೂರು, ಜಂಬಲದಿನ್ನಿ, ಗಾರಲದಿನ್ನಿ, ವೈ.ಮಲ್ಲಾಪುರು, ಬುಳ್ಳಾಪುರು, ಗಧಾರ, ಚಂದ್ರಬಂಡಾ, ಗಣಮೂರು, ಜೇ.ಮಲ್ಲಾಪುರು,ಹೆಚ್.ತಿಮ್ಮಾಪುರು, ವಡ್ಲೂರು, ಸಗಮಕುಂಟಾ, ಡಿ.ರಾಂಪುರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್