ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸರ್ವಾಧಿಕಾರಿ ಬಿಜೆಪಿಯನ್ನು ಸೋಲಿಸಲು ಹಾಗೂ ಸಂವಿಧಾನ ಉಳಿಸುವ ಪಕ್ಷಗಳನ್ನು ಗೆಲ್ಲಿಸಲು CPIML RI ಕರೆ.

Advertisement
ಮೇ. 6 ಸಿಂಧನೂರ ನಗರ ಹಾಗೂ ಗ್ರಾಮೀಣ ಭಾಗದದಲ್ಲಿ ಪ್ರಚಾರ ಅಭಿಯಾನ ನಡೆಸಲಾಗಿದೆ.

ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಯಾದ ಕಾಮ್ರೇಡ ಡಿ.ಹೆಚ್.ಪೂಜಾರ, TUCI ರಾಜ್ಯ ಕಾರ್ಯದರ್ಶಿಯಾದ ಕೆ.ಬಿ.ಗೋನಾಳ, ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ಬಿ.ಎನ್.ಯರದಿಹಾಳ, ಜನ ಸಾಂಸ್ಕೃತಿಕ ಸಂಘದ ಬಸವರಾಜ ಬಾಗಲವಾಡ, ಶರಣು,ಇತರರು ಭಾಗವಹಿಸಿದ್ದರು. ನಗರದ ಮೂರು ಮೈಲ್ ಕ್ಯಾಂಪ್, ದೋಬಿಗಲ್ಲಿ, ಹಾಗೂ ಜವಳಗೇರ  ಇತರೆ ಭಾಗಗಳಲ್ಲಿ ನಡೆಸಲಾಯಿತು.

ಸಿಲಿಂಡರ ಗ್ಯಾಸ್, ಪೆಟ್ರೋಲ್ ಡೀಸೇಲ್ ಇತರೆ ಅಗತ್ಯ ವಸ್ತಗಳು, ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸಿದ್ದರ ಕುರಿತು, ಪ್ರಧಾನ ಗರೀಬ್ ಕಲ್ಯಾಣ ಯೋಜನೆಯನ್ನು ರದ್ದುಗೊಳಿಸಿ, 10 ಕೇಜಿ ಅಕ್ಕಿಗೆ ಕಲ್ಲು ಹಾಕಲಾಗಿದೆ. ಮತದಾರರು ಈ ಕುರಿತು ಎಲ್ಲಾ ಪಕ್ಷದವರನ್ನು ಪ್ರಶ್ನೆ ಮಾಡಲು ಕರೆ ಕೊಡಲಾಯಿತು.

ಕಾಂಗ್ರೆಸ್‌ ಬಿಡುಗಡೆ ಮಾಡಿದ ಚುನಾವಣೆ ಪ್ರಣಾಳಿಕೆಯಲ್ಲಿ ಹಲವು ಅಂಶಗಳು ಜನರಿಗೆ ಅನುಕೂಲವಾಗುವಂತವಾಗಿವೆ.

(ಅಧಿಕಾರಕ್ಕೆ ಬಂದರೆ ಜಾರಿಗೊಳಿಸುತ್ತಾರೋ ಇಲ್ಲ ಗೊತ್ತಿಲ್ಲ)

ಮೀಸಲಾತಿ 76 ಕ್ಕೆ ಹೆಚ್ಚಳ, ಖಾಲಿ ಇರುವ ಹುದ್ದೆಗಳ ನಮಕಾತಿ ಭರ್ತಿ ಮಾಡಿಕೊಳ್ಳುವುದು, 25 ಸಾವಿರ ಪೌರಕಾರ್ಮಿಕರ ಕಾಯಂ, ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಇತ್ಯಾದಿ.



ಮುಖ್ಯವಾಗಿ ಎಪಿಎಂಸಿ, ಭೂ ಗುತ್ತಿಗೆ, ಮತಾಂತರ ನಿಷೇಧ ಕಾಯ್ದೆ, ಜಾನುವಾರು ಸಂರಕ್ಷಣೆ ತಿದ್ದುಪಡಿ, ಇತರೆ ತಿದ್ದುಪಡಿ ಕಾಯ್ದೆಗಳನ್ನು ವಾಪಸ ಪಡೆಯುವ, ನೂತನ ಶಿಕ್ಷಣ ನೀತಿಯನ್ನು (NEP) ಕೈಬಿಡುವ ಇತರೆ ಅಂಶಗಳು ಅತ್ಯಂತ ಪ್ರಮುಖವಾಗಿವೆ.

ಈ ಅಂಶಗಳಗಳನ್ನು ಮರೆ ಮಾಚಲು ಬಿಜೆಪಿಯವರು ಬಜರಂಗಿಯ ವಿಷಯವನ್ನು ಮುನ್ನೆಲ್ಲೆಗೆ ತಂದಿದ್ದಾರೆ.

60 ರ್ವರ್ಷಗಳ ಕಾಂಗ್ರೆಸ್‌ ಆಳ್ವಿಕೆಯ ಇತಿಹಾಸ ಸಂಪೂರ್ಣ ಜನಪರವಾಗಿಯೇನು ಇರಲಿಲ್ಲ. ಆದರೆ ಕನಿಷ್ಠ ಸಂವಿಧಾನ ಚೌಕಟ್ಟಿನಲ್ಲಿ ತಮ್ಮ ಆಳ್ವಿಕೆಯನ್ನು ನಡೆಸುತ್ತಿದ್ದರು . ಅಂಬೇಡ್ಕರ್ ರವರ ಸಮಾಜವಾದಿ ಆಶಯಗಳನ್ನು ಬಲಿ ಕೊಡಲಾಗುತ್ತದೆ.ಬಿಜೆಪಿಯವರು ಸಂವಿಧಾನವನ್ನು ಧ್ವಂಸಗೊಳಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ಹಿಂದೂ ರಾಷ್ಟ್ರದ ಅಜಂಡ, ಜಾತಿ ವ್ಯವಸ್ಥೆಯನ್ನು ಇನ್ನಷ್ಟು ಭದ್ರಗೊಳಿಸಿ,ಅಸ್ಪೃಶ್ಯತೆ, ಆಚರಣೆ ಮಹಿಳೆಯರ ಶೋಷಣೆಯ ಮರುಸ್ಥಾಪಿಸುವುದಾಗಿದೆ. ಈ ಕಾರಣಕ್ಕಾಗಿಯೆ ಬಿಜೆಪಿಯನ್ನು ಸೋಲಿಸಬೇಕಾಗಿದೆ.

ರಾಜ್ಯದಲ್ಲಿ ಯಾವುದೆ ಪಕ್ಷವಾಗಲಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಲಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಇದ್ದವರಿಗೆ ಮತ ನೀಡಬೇಕೆಂದು ಕೋರಲಾಗಿದೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ