ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಾವರ್ಕರನ್ನು ಸೋಲಿಸಿ! ಅಂಬೇಡ್ಕರನ್ನು ಗೆಲ್ಲಿಸಿ!-ಆರ್ ಮಾನಸಯ್ಯ

Advertisement
ಏಪ್ರಿಲ್ 15. ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟದಿಂದ ಸಿಂಧನೂರು ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132 ನೆಯ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷರಾದ, ಹಾಗೂ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಮುಖಂಡರಾದ ಆರ್. ಮಾನಸಯ್ಯ ನವರು ಮಾತನಾಡಿದರು. ಅವರು, ಸಂಘ ಪರಿವಾರದ ಸಾವರ್ಕರ್ ವಿರುದ್ಧ, ಪ್ರಜಾಪ್ರಭುತ್ವವಾದಿ ಅಂಬೇಡ್ಕರ್ ಪರವಾಗಿ ಮತ ನೀಡಬೇಕೆಂದರು. ಹಾಗೆಯೇ ಮನು ಧರ್ಮ ಶಾಸ್ತ್ರದ ವಿರುದ್ಧ, ಸಂವಿಧಾನದ ಪರ ಕೆಲಸ ಮಾಡುವ ಶಕ್ತಿಗಳಿಗೆ ಮತ ಹಾಕಬೇಕೆಂದರು. ಜಾತಿವಾದದ ವಿರುದ್ಧ, ಜಾತಿ ನಿರ್ಮೂಲನೆಗಾಗಿ ಹೋರಾಡುವ ಶಕ್ತಿಗಳ ಪರ ಮತ ಹಾಕಬೇಕೆಂದರು. ಹಾಗೆಯೇ ಆರ್ಥಿಕ ಮೀಸಲಾತಿ ವಿರುದ್ಧ, ಸಾಮಾಜಿಕ ಮೀಸಲಾತಿ ಪರವಾಗಿ, ಈ ಮೀಸಲಾತಿಯ ಅನುಷ್ಠಾನಕ್ಕಾಗಿ ಮುಂದಾಗುವ ಶಕ್ತಿಗಳ ಪರ ಮತ ಚಲಾಯಿಸಬೇಕೆಂದರು. ಕೊನೆಯದಾಗಿ, ಸಾವರ್ಕರನ್ನು ಸೋಲಿಸಿ! ಅಂಬೇಡ್ಕರ್ ರನ್ನು ಗೆಲ್ಲಿಸಿ! ಹಿಂದು ರಾಷ್ಟ್ರವನ್ನು ಸೋಲಿಸಿ! ಇಂಡಿಯಾ ದೇಶವನ್ನು ಗೆಲ್ಲಿಸಿ! ಎಂದು ಕರೆ ನೀಡಿದರು.

https://youtu.be/h03xkTAfAYg

ಮೀಸಲಾತಿ ಹೆಚ್ಚಿಳ,

ಒಳಮಿಸಲಾತಿ ಜಾರಿ ಎನ್ನುವುದು ಚುನಾವಣೆಯ ತಂತ್ರ ಮಾತ್ರ ಆಗಿದೆ. ಜಾರಿಗೆ ಆಗುವುದು ಅಷ್ಟು ಸುಲಭದ ಮಾತಲ್ಲ, ಲೋಕಸಭೆ ಹಾಗೂ ಸಂವಿಧಾನದ‌ ಪೀಠದಿಂದ ಅನುಮೋದನೆ ಆಗಬೇಕು.ಕೇವಲ 3 % ಇರುವ ವರ್ಗಕ್ಕೆ 10 % ಮೀಸಲಾತಿ ಜಾರಿಗೆ ಮಾಡಿರುವುದು ಜೊತೆಗೆ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ರದ್ದು ಪಡಿಸಿದ್ದು ಖಂಡನೆ ಎಂದರು



ಮುಖ್ಯಅತಿಥಿಗಳಾಗಿ ಪೀರಬಾಷ‍ ಶಂಕರವಾಲೇಕರ್ ವಿರುಪಮ್ಮ,ಸೇರಿದಂತೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಆರ್ ಬೋನವೆಂಚರ್ ಮಾತನಾಡಿದರು. ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಆರ್ ಸಿಎಪ್ ನಿಂದ ಕ್ರಾಂತಿಕಾರಿ ಹಾಡುಗಳ ಮೂಲಕ ಜಯಂತಿಗೆ ಹೆಚ್ಚು ಮೇರಗು ತಂದು ಕೊಟ್ಟರು. ಪ್ರಾಸ್ತಾವಿಕ ಒಕ್ಕೂಟದ ಎಂ ಗಂಗಾಧರ, ನೀರೂಪಣೆ ನಿರುಪಾದಿ ಸಾಸಲಮರಿ ನೆರವೇರಿಸಿದರು.

 

ಡಿ.ಹೆಚ್.ಕಂಬಳಿ,ಮಾಬುಸಾಬ್ ಬೆಳ್ಳಟ್ಟಿ,ನಾರಾಯಣ ಬೆಳಗುರ್ಕಿ,ರಾಮಣ್ಣ ಗೋನವಾರ,ಕೆ.ಮರಿಯಪ್ಪ ಸುಕಾಲಪೇಟೆ,ಆರ್ ಹುಚ್ಚರೆಡ್ಡಿ,ಆದೇಶ ನಗನೂರು,ಸೇರಿದಂತೆ ಒಕ್ಕೂಟದ ಸಂಚಾಲಕರು ಹಾಗೂ ನೂರಾರು ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

 

ಎಂ.ಗಂಗಾಧರ

ಸಂಚಾಲಕರು ದಲಿತ ಅಲ್ಪಸಂಖ್ಯಾತ

ಶೋಷಿತ ಸಮುದಾಯಗಳ ಒಕ್ಕೂಟ ಸಿಂಧನೂರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ