ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಿಂಧನೂರಿನ ನಮ್ಮ ಕರ್ನಾಟಕ ಸೇನೆಯಿಂದ ಪದಾಧಿಕಾರಿಗಳ ನೇಮಕ, ನೂತನ ಪದಾಧಿಕಾರಿಗಳ ಪದಗ್ರಹಣ

Advertisement
ಸಿಂಧನೂರು ಅ 02.ನಗರದ ಗಂಗಾವತಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ಸೇನೆಯ ತಾಲೂಕಘಟಕ,ನಗರ ಘಟಕ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಅಧ್ಯಕ್ಷ ರಮೇಶ ಪಡಕೋಟೆ ಇವರ ಅಧ್ಯಕ್ಷತೆಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು.



ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಅಧ್ಯಕ್ಷ ರಮೇಶ ಪಡಕೋಟೆರವರು ಮಾತನಾಡಿ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಗೆ ಧಕ್ಕೆ ಆದಲ್ಲಿ ಅನ್ಯಾಯದ ವಿರುದ್ಧ ನಮ್ಮ ಕರ್ನಾಟಕ ಸೇನೆಯು ದಿಟ್ಟತನದಿಂದ ವಿರೋಧಿಸುತ್ತಿದೆ. ಉತ್ತರ ಕರ್ನಾಟಕದವರೆ ಆಗಿರುವ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಬಸವರಾಜ ಪಡುಕೋಟೆರವರ ಕೈ ಬಲ ಪಡಿಸಲು ಈ ಭಾಗದಲ್ಲಿ ಸಂಘಟನೆ ಹೆಚ್ಚು ಒತ್ತು ಕೊಡಬೇಕು. ಆದ್ದರಿಂದ ಕನ್ನಡ ವಿರೋಧಿ ಧೋರಣೆಗಳನ್ನು ಖಂಡಿಸುವ ಮನೋಭಾವ ಬೆಳೆಸಿಕೊಂಡು, ಕ್ರಿಯಾಶೀಲರಾಗಿ ಸಿಂಧನೂರು ತಾಲೂಕ ಅಧ್ಯಕ್ಷ ಮಂಜುನಾಥ ಗಾಣಿಗೇರರವರ ನೇತೃತ್ವದಲ್ಲಿ ಸಂಘಟನೆಯನ್ನು ಬಲಪಡಿಸುವಂತೆ ನೂತನ ಪದಾಧಿಕಾರಿಗಳಿಗೆ ಹೇಳಿದರು.



ಜಿಲ್ಲಾ ಪ್ರಧಾನ ಸಂಚಾಲಕ ಮಾಣಿಕ್ ಇಂಗಳೆ ಮಾತನಾಡಿ ಹುಟ್ಟು ಹೋರಾಟಗಾರರಾದ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಬಸವರಾಜ ಪಡುಕೋಟೆರವರ ಮಾರ್ಗದರ್ಶನ ಮತ್ತು ಜಿಲ್ಲಾ ಅಧ್ಯಕ್ಷ ರಮೇಶ ಪಡಕೋಟೆರವರ ಸಲಹೆಯಿಂದ ತಾಲೂಕಾಧ್ಯಕ್ಷ ಮಂಜುನಾಥ ಗಾಣಿಗೇರ ಜೊತೆಗೂಡಿ ತಾಲೂಕಿನಾದ್ಯಂತ ಕನ್ನಡ ಪರ ಹೋರಾಟಗಳನ್ನು ಮಾಡುವ ಜೊತೆ‌ ಸ್ಥಳೀಯ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಸಂಘಟನೆಯು ಜನಸ್ನೇಹಿಯಾಗಿ ನಡೆಯುವಂತೆ ನೂತನ ಪದಾಧಿಕಾರಿಗಳು ಸಹಕಾರ ನೀಡಬೇಕು ಎಂದು ಹೇಳಿದರು.



ನಮ್ಮ ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ಮಂಜುನಾಥ ಗಾಣಿಗೇರ ನೂತನ ಪದಾಧಿಕಾರಿಗಳಿಗೆ ಪದನಾಮದ ಆದೇಶ ಪತ್ರ ನೀಡಿ ಮಾತನಾಡಿ, ನಮ್ಮ ಕರ್ನಾಟಕ ಸೇನೆಯು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಜೊತೆ ಅಖಂಡ ಕರ್ನಾಟಕಕ್ಕೆ ಧಕ್ಕೆ ತರುವ ಸಂದರ್ಭ ಬಂದಾಗ ನೇರವಾಗಿ ಖಂಡಿಸುತ್ತದೆ, ನಮ್ಮ ಸಂಘಟನೆ ಉದ್ದೇಶಗಳಿಗೆ ಪೂರಕವಾಗುವಂತೆ ಪದಾಧಿಕಾರಿಗಳು ನಡೆದುಕೊಳ್ಳಬೇಕು. ನಮ್ಮ ಕರ್ನಾಟಕ ಸೇನೆಯ ಸಂಘಟನೆಯನ್ನು ಈ ಭಾಗದಲ್ಲಿ ಬಲಪಡಿಸುವ ಮೂಲಕ ನಮ್ಮ ಸಂಘಟನೆ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟೆ ಹಾಗೂ ಜಿಲ್ಲಾ ಅಧ್ಯಕ್ಷ ರಮೇಶ ಪಡಕೋಟೆರವರ ಶಕ್ತಿ ಹೆಚ್ಚಿಸುವ ಕಾರ್ಯ ಮಾಡೋಣ ಎಂದರು.

 

ಅದೇ ರೀತಿ ವೇದಿಕೆಯಲ್ಲಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಮುಖಂಡ ಬೂದೇಶ ಮರಾಠ, ನಮ್ಮ ಕರ್ನಾಟಕ ಸೇನೆಯ ತಾಲೂಕಘಟಕ ಗೌರವಾಧ್ಯಕ್ಷ ಅವಿನಾಶ ದೇಶಪಾಂಡೆ, ಸೇರಿದಂತೆ ಹಲವರಿದ್ದರು ಈ ಕಾರ್ಯಕ್ರಮದ ನಿರೂಪಣೆಯನ್ನು ಜಡಿಸ್ವಾಮಿ ಸಿಂಗಾಪುರ ಸ್ವಾಗತವನ್ನು ಪ್ರಶಾಂತ್ ಮಾಡಿದರು.

 

ಪದಾಧಿಕಾರಿಗಳು:

ತಾಲೂಕು ಘಟಕ ಗೌರವಾಧ್ಯಕ್ಷ: ಅವಿನಾಶ್ ದೇಶಪಾಂಡೆ

ತಾಲೂಕಾ ಉಪಾಧ್ಯಕ್ಷ: ಓಬಳೇಶ್ ನಾಯಕ್

ತಾಲೂಕಾ ಪ್ರಧಾನ ಕಾರ್ಯದರ್ಶಿ: ಜಡಿಸ್ವಾಮಿ ಸಿಂಗಾಪುರ

ತಾಲೂಕಾ ಸಂಘಟನಾ ಕಾರ್ಯದರ್ಶಿ:ರಘು ಅಲ್ಲೂರಕರ್

ತಾಲೂಕಾ ಕಾರ್ಯದರ್ಶಿ: ವೆಂಕಟೇಶ್ ನಾಯಕ್

ತಾಲೂಕಾ ಸಹಕಾರ್ಯದರ್ಶಿ: ಟಿ.ರಮೇಶ

ತಾಲೂಕಾ ಖಜಾಂಚಿ:ಗೋಪಾಲ ಶ್ರೇಷ್ಠಿ

ತಾಲೂಕಾ ಸಂಚಾಲಕ:ಮೌನೇಶ ಕೊಲಮಿ

ತಾಲೂಕಾ ಘಟಕದ ಸದಸ್ಯ: ಹುಲುಗಪ್ಪ

ನಗರ ಘಟಕ ಅಧ್ಯಕ್ಷ: ಶಿವರಾಜ್

ನಗರ ಘಟಕ ಪ್ರ.ಕಾರ್ಯದರ್ಶಿ: ಪ್ರಶಾಂತ್

ನಗರ ಘಟಕ ಕಾರ್ಯದರ್ಶಿ: ಮಂಜುನಾಥ

ಗ್ರಾಮೀಣ ಘಟಕ ಕಾರ್ಯಾದರ್ಶಿ:ಸಿದ್ದಪ್ಪ

ಸದಸ್ಯರು: ನಾಗರಾಜ್ ಖಂಡಿಮಠ,ಬಾಬ ಖಾನ್, ಸುರೇಶ್ ಪಾಟೀಲ್, ಸುರೇಶ್, ಯಮನೂರಗೌಡ
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್