ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

“ಸೀಕ್ರೆಟ್ ಟಾಕ್ (Secret Talk)”

Advertisement
ಸೀಕ್ರೆಟ್ ಟಾಕ್ (Secret Talk)” – ಸಿಂಧನೂರು ಸಾರ್ವಜನಿಕ ಆಸ್ಪತ್ರೆ ಕುರಿತು ಕಟ್ಟೆ ಮೇಲಿನ ಗುಸು-ಗುಸು ಮಾತುಗಳು

ಸಿಂಧನೂರು: BB NEWS KANNADA
ಸಿಂಧನೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆ ಎಂಬ ಆರೋಪಗಳು ಹೊರಬಂದಿರುವ ಘಟನೆ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಘಟನೆ ಬೆಳಕಿಗೆ ಬಂದ ನಂತರ ನಗರದ ಬಸ್ ನಿಲ್ದಾಣ, ಚಹಾ ಅಂಗಡಿಗಳು, ಹೋಟೆಲ್ ಕಟ್ಟೆಗಳು, ಸಾರ್ವಜನಿಕ ಸ್ಥಳಗಳು ಸೇರಿದಂತೆ ಹಲವೆಡೆ ಜನರು ಗುಸು-ಗುಸು ಮಾತುಗಳಲ್ಲಿ ಈ ವಿಷಯವನ್ನು ಚರ್ಚಿಸುತ್ತಿರುವುದು ಗಮನಕ್ಕೆ ಬಂದಿದೆ.
ಸಾಮಾನ್ಯವಾಗಿ ರಾಜಕೀಯ ಅಥವಾ ಆಡಳಿತಾತ್ಮಕ ವಿಷಯಗಳ ಬಗ್ಗೆ ನಡೆಯುವ “ಕಟ್ಟೆ ಮಾತು”ಗಳಂತೆ, ಈಗ ಆಸ್ಪತ್ರೆಯ ಸೇವೆ ಮತ್ತು ವೈದ್ಯರ ಕರ್ತವ್ಯ ನಿರ್ವಹಣೆ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
“ಸಂಬಳ ದೊಡ್ಡದು, ಸೇವೆ ಎಲ್ಲಿದೆ?” – ಸಾರ್ವಜನಿಕರ ಪ್ರಶ್ನೆ
ಚರ್ಚೆಯಲ್ಲಿ ಪಾಲ್ಗೊಂಡ ಕೆಲವರು ವೈದ್ಯರ ಕರ್ತವ್ಯ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ವೈದ್ಯರು ತಮ್ಮ ಕರ್ತವ್ಯದ ಸಮಯದಲ್ಲಿ ಸರಿಯಾಗಿ ಕೆಲಸ ಮಾಡಿದರೆ ಯಾರೂ ಪ್ರಶ್ನೆ ಮಾಡುವುದಿಲ್ಲ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವವರು ಜನರಿಗೆ ಸೇವೆ ಮಾಡಲು ಮುಂದಾಗಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರೂ ಕೆಲವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ” ಎಂದು ಒಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬರು,
“ನಾನು ನನ್ನ ಮಗನನ್ನು ಇಂಜಿನಿಯರಿಂಗ್ ಓದಿಸಿ ಬೆಂಗಳೂರಿಗೆ ಕೆಲಸಕ್ಕೆ ಕಳಿಸಿದ್ದೇನೆ. ಅವನಿಗೆ ವರ್ಷಕ್ಕೆ ಆರು-ಏಳು ಲಕ್ಷ ಪ್ಯಾಕೇಜ್ ಇದೆ. ಆದರೆ ಸರ್ಕಾರಿ ಆಸ್ಪತ್ರೆಯ ಕೆಲ ವೈದ್ಯರು ತಿಂಗಳಿಗೆ ಒಂದೂವರೆ ಲಕ್ಷದಿಂದ ಮೂರು ಲಕ್ಷ ರೂಪಾಯಿ ವರೆಗೆ ಸಂಬಳ ಪಡೆಯುತ್ತಾರೆ. ಇಷ್ಟೊಂದು ವೇತನ ಇದ್ದರೂ ಸೇವೆಯಲ್ಲಿ ಏಕೆ ನಿರ್ಲಕ್ಷ್ಯ ಎನ್ನುವುದು ಅರ್ಥವಾಗುವುದಿಲ್ಲ” ಎಂದು ಪ್ರಶ್ನಿಸಿದರು.
“ದೊಡ್ಡ ಕಟ್ಟಡಗಳು… ಆದರೆ ಸಿಬ್ಬಂದಿ ಕೊರತೆ”
ಚರ್ಚೆಯ ನಡುವೆ ಸರ್ಕಾರದ ಯೋಜನೆಗಳ ಬಗ್ಗೆ ಕೂಡ ಕೆಲವರು ಟೀಕೆ ವ್ಯಕ್ತಪಡಿಸಿದರು.
“ಸರ್ಕಾರ ದೊಡ್ಡ ದೊಡ್ಡ ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸುತ್ತದೆ. ಆದರೆ ಅದಕ್ಕೆ ತಕ್ಕಂತೆ ಯಂತ್ರೋಪಕರಣಗಳು ಮತ್ತು ಸಿಬ್ಬಂದಿ ಇರುವುದಿಲ್ಲ. ಕೆಲವಡೆ 50 ಶೇಕಡಾ ಸಿಬ್ಬಂದಿಯೂ ಇಲ್ಲದ ಸ್ಥಿತಿ ಇದೆ. ಕಟ್ಟಡ ಇದ್ದರೆ ಸಾಕಾಗುವುದಿಲ್ಲ, ಅದರೊಳಗೆ ಸೇವೆ ನೀಡುವ ವ್ಯವಸ್ಥೆಯೂ ಸಮರ್ಪಕವಾಗಿರಬೇಕು” ಎಂದು ಕೆಲವರು ಅಭಿಪ್ರಾಯಪಟ್ಟರು.
ಒಬ್ಬರು ಘಟನೆಗೆ ಉದಾಹರಣೆ ನೀಡಿ,
“ಮೊನ್ನೆ ಮಹಿಳೆ ಮೃತಪಟ್ಟ ಸಮಯದಲ್ಲಿ ತುರ್ತು ಚಿಕಿತ್ಸೆಗೆ ಹಲವರು ಬಂದಿದ್ದರು ಎಂದು ಕೇಳಿದ್ದೇವೆ. ಒಬ್ಬ ವೈದ್ಯರು ಎಲ್ಲ ರೋಗಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ? ಅವರು ದೇವರು ಅಲ್ಲ, ರೋಬೋಟ್ ಕೂಡ ಅಲ್ಲ. ಸರ್ಕಾರ ಇನ್ನಷ್ಟು ವೈದ್ಯರನ್ನು ನೇಮಿಸಬೇಕು” ಎಂದು ಹೇಳಿದರು.
ಆಸ್ಪತ್ರೆಯಲ್ಲಿ ರೋಗಿಗಳ ಓಡಾಟ
ಚರ್ಚೆಯಲ್ಲಿದ್ದ ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡು,
“ನಾನು ಮೊನ್ನೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದಾಗ ವೈದ್ಯರು ಎಲ್ಲಿದ್ದಾರೆ ಎಂದು ಕೇಳಿದರೆ ಮೇಲಿದ್ದಾರೆ ಎಂದು ಹೇಳಿದರು. ಮೇಲೆ ಹೋದರೆ ಕೆಳಗೆ ಇದ್ದಾರೆ ಎನ್ನುತ್ತಾರೆ. ಕೆಳಗೆ ಹೋದರೆ ಆಪರೇಷನ್ ಥಿಯೇಟರ್‌ನಲ್ಲಿ ಇದ್ದಾರೆ ಎನ್ನುತ್ತಾರೆ. ಅಲ್ಲಿ ಹೋಗಿದರೆ ಒಳಗೆ ಬಿಡುವುದಿಲ್ಲ. ಒಟ್ಟಿನಲ್ಲಿ ರೋಗಿಗಳನ್ನು ಒಂದು ಕಡೆದಿಂದ ಮತ್ತೊಂದು ಕಡೆಗೆ ಓಡಿಸುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಅವರು ಮುಂದುವರೆಸಿ,
“ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಕರೆ ಮಾಡಿದರೂ ಫೋನ್ ಸ್ವೀಕರಿಸುವುದಿಲ್ಲ. ಕೆಲವೊಮ್ಮೆ ಸ್ವೀಕರಿಸಿದರೂ ‘ನೋಡುತ್ತೇವೆ’ ಎಂಬ ಉತ್ತರ ಮಾತ್ರ ಸಿಗುತ್ತದೆ. ನಾಯಕರುಗಳಿಗೆ ಹೇಳಿದರೆ ‘ಅಡ್ಜಸ್ಟ್ ಮಾಡಿಕೊಂಡು ಹೋಗಿ’ ಎಂಬ ಮಾತೇ ಕೇಳುತ್ತದೆ” ಎಂದು ಹೇಳಿದರು.
“ವೈದ್ಯರು ಸಿಗೋದಿಲ್ಲ” ಎನ್ನುವ ಮಾತಿಗೆ ಪ್ರಶ್ನೆ
ಚರ್ಚೆಯ ನಡುವೆ ಕೆಲವರು ವೈದ್ಯರ ಕೊರತೆ ಬಗ್ಗೆ ಹೇಳಲಾಗುವ ಕಾರಣಕ್ಕೂ ಪ್ರಶ್ನೆ ಎತ್ತಿದರು.
“ಪ್ರತಿ ವರ್ಷ ದೇಶದಲ್ಲಿ ಸಾವಿರಾರು ಸ್ಪೆಷಲಿಸ್ಟ್ ವೈದ್ಯರು ಪಾಸಾಗಿ ಬರುತ್ತಿದ್ದಾರೆ. ವೈದ್ಯರು ಸಿಗೋದಿಲ್ಲ ಎನ್ನುವುದು ಸಂಪೂರ್ಣ ಸತ್ಯ ಅಲ್ಲ. ಕರ್ತವ್ಯದ ಸಮಯದಲ್ಲಿ ನಿರ್ಲಕ್ಷ್ಯ ತೋರಿಸುವವರನ್ನು ಬದಲಾಯಿಸಿ ಸೇವಾಭಾವದಿಂದ ಕೆಲಸ ಮಾಡುವವರಿಗೆ ಅವಕಾಶ ನೀಡಬೇಕು” ಎಂದು ಒಬ್ಬರು ಅಭಿಪ್ರಾಯಪಟ್ಟರು.


ಬಯೋಮೆಟ್ರಿಕ್ ಇದ್ದರೂ ಕಟ್ಟುನಿಟ್ಟಿಲ್ಲ
ಸಾರ್ವಜನಿಕರು ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಮಾತನಾಡುತ್ತಾ,
“ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಇದೆ ಎಂದು ಹೇಳುತ್ತಾರೆ. ಆದರೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದಿಲ್ಲ. ಕೆಲವರು ಬೆಳಗ್ಗೆ 10.30 ಆದರೂ ಆಸ್ಪತ್ರೆಗೆ ಬರುವುದಿಲ್ಲ. ಸಂಜೆ 4 ಗಂಟೆಗೂ ಮುಂಚೆ ಹೊರಟು ಹೋಗುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ” ಎಂದು ಹೇಳಿದರು.
ಇದರಿಂದ ನಿಷ್ಠೆಯಿಂದ ಕೆಲಸ ಮಾಡುವ ಕೆಲವು ವೈದ್ಯರಿಗೂ ಕೆಟ್ಟ ಹೆಸರು ಬರುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟರು.

https://www.instagram.com/reel/DVyD_MEiS-s/?igsh=MTZuZDV0NXJiemRhaQ==
ಜನರ ಒತ್ತಾಯ – ಕಠಿಣ ಕ್ರಮ ಅಗತ್ಯ
ಚರ್ಚೆಯ ಕೊನೆಯಲ್ಲಿ ಹಲವರು ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳು ಆಸ್ಪತ್ರೆಗಳ ಕಾರ್ಯವೈಖರಿಯನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಮತ್ತು ವೈದ್ಯರ ಕೊರತೆ ಇದ್ದರೆ ಅದನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರು ಸರ್ಕಾರಿ ಆಸ್ಪತ್ರೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡು ಖಾಸಗಿ ಆಸ್ಪತ್ರೆಗಳತ್ತ ಹೆಚ್ಚು ಅವಲಂಬಿತರಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸಿದರು.

https://www.instagram.com/reel/DUI6Cs1ksLJ/?igsh=MThjaXgwd3FqNXRoOA==
ಸೂಚನೆ:
ಈ “ಸೀಕ್ರೆಟ್ ಟಾಕ್” ಸುದ್ದಿ ಸಾರ್ವಜನಿಕ ಸ್ಥಳಗಳಲ್ಲಿ ಕೇಳಿಬಂದ ಗುಸು-ಗುಸು ಮಾತುಗಳು ಮತ್ತು ಜನರ ಅಭಿಪ್ರಾಯಗಳ ಆಧಾರಿತವಾಗಿದೆ. ಜನಮನದಲ್ಲಿ ಮೂಡಿರುವ ಪ್ರಶ್ನೆಗಳು ಮತ್ತು ಅಸಮಾಧಾನವನ್ನು ಪ್ರತಿಬಿಂಬಿಸುವ ಪ್ರಯತ್ನವಾಗಿದೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್