ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಿಂಧನೂರಿಗೆ ಡಬಲ್ ಧಮಾಕಾ..? ಇಬ್ಬರು ಬಾದರ್ಲಿಗಳಿಗೆ ಸಚಿವ ಸ್ಥಾನ ಸಿಗುತ್ತಾ..?

ತಾತ-ಮೊಮ್ಮಗ ಇಬ್ಬರಿಗೂ ಸ್ಥಾನ ಸಿಕ್ಕರೆ ಕ್ಷೇತ್ರದ ಅಭಿವೃದ್ಧಿಗೆ ವೇಗ ಸಿಗಲಿದೆ ಎನ್ನುವ ಸಾರ್ವಜನಿಕರು

Advertisement

ಸಿಂಧನೂರಿಗೆ ಎರಡು ಸಚಿವ ಸ್ಥಾನಗಳಾ..? ತಾತ–ಮೊಮ್ಮಗ ಇಬ್ಬರಿಗೂ ಕ್ಯಾಬಿನೆಟ್ ಅವಕಾಶ ಸಿಗುತ್ತಾ..? ರಾಜಕೀಯ ವಲಯದಲ್ಲಿ ಭಾರೀ ಚರ್ಚೆ

Advertisement

ಸಿಂಧನೂರು : ರಾಜ್ಯ ಸಚಿವ ಸಂಪುಟ ಪುನಾರಚನೆ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರಕ್ಕೆ ಎರಡು ಪ್ರಭಾವಿ ಹುದ್ದೆಗಳು ಸಿಗುವ ಸಾಧ್ಯತೆ ಇದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಬಸವನಗೌಡ ಬಾದರ್ಲಿ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.

news_1780027666_0_213.webp

ಸಿಂಧನೂರು ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಲೇಬೇಕು ಎಂದು ಹಂಪನಗೌಡ ಬಾದರ್ಲಿ ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದರೆ, ಬಸವನಗೌಡ ಬಾದರ್ಲಿ ಅವರ ಅಭಿಮಾನಿಗಳು ಕೂಡ ತಮ್ಮ ನಾಯಕನಿಗೆ ಸಚಿವ ಸ್ಥಾನ ಅಥವಾ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿ ಸಿಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀ ಹಂಪನಗೌಡ ಬಾದರ್ಲಿ ಶಾಸಕರು
ಶ್ರೀ ಹಂಪನಗೌಡ ಬಾದರ್ಲಿ ಶಾಸಕರು

ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಂಪನಗೌಡ ಬಾದರ್ಲಿ ಅವರು ಜಿಲ್ಲೆಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿರುವ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದು ಅವರ ಬೆಂಬಲಿಗರ ವಾದವಾಗಿದೆ. ಹಿರಿಯತೆಗೆ ಹಾಗೂ ಅನುಭವಕ್ಕೆ ಮನ್ನಣೆ ನೀಡಿ ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಪಕ್ಷದ ಕಾರ್ಯಕರ್ತರಲ್ಲೂ ಕೇಳಿಬರುತ್ತಿದೆ.

ಶ್ರೀ ಬಸನಗೌಡ ಬಾದರ್ಲಿ MLC
ಶ್ರೀ ಬಸನಗೌಡ ಬಾದರ್ಲಿ MLC

ಇನ್ನೊಂದೆಡೆ, ಯುವ ನಾಯಕನಾಗಿ ಗುರುತಿಸಿಕೊಂಡಿರುವ ಬಸವನಗೌಡ ಬಾದರ್ಲಿ ಅವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇರಿದಂತೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ಅವಿರೋಧವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಅವರು ಕಾಂಗ್ರೆಸ್ ಪಕ್ಷದ ಯುವ ಮುಖಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಉನ್ನತ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿರುವ ಕಾರಣ ಅವರಿಗೆ ಸರ್ಕಾರದಲ್ಲಿ ಮಹತ್ವದ ಸ್ಥಾನ ಸಿಗಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

news_1778905892_0_440.webp

news_1778142080_0_556.webp

ಆದರೆ, ಈ ಎಲ್ಲ ಚರ್ಚೆಗಳು ಸದ್ಯಕ್ಕೆ ಕೇವಲ ರಾಜಕೀಯ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಊಹಾಪೋಹಗಳಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

news_1777986246_0_709.webp

ಇದೇ ವೇಳೆ ಸಾರ್ವಜನಿಕ ವಲಯದಲ್ಲಿ ಮತ್ತೊಂದು ಕುತೂಹಲಕಾರಿ ಚರ್ಚೆಯೂ ನಡೆಯುತ್ತಿದೆ. "ಒಬ್ಬರು ಶಾಸಕರು, ಇನ್ನೊಬ್ಬರು ವಿಧಾನ ಪರಿಷತ್ ಸದಸ್ಯರು. ಇಬ್ಬರೂ ಸಿಂಧನೂರಿನವರೇ. ಒಬ್ಬರ ಮೂಲಕ ಕೆಲಸ ಆಗದಿದ್ದರೆ ಮತ್ತೊಬ್ಬರ ಬಳಿ ಹೋಗಬಹುದು. ಇಬ್ಬರೂ ಪ್ರಭಾವಿ ಹುದ್ದೆಗಳಲ್ಲಿ ಇದ್ದರೆ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಬಹುದು" ಎಂಬ ಅಭಿಪ್ರಾಯಗಳು ಕೆಲವರಿಂದ ವ್ಯಕ್ತವಾಗುತ್ತಿವೆ. "ತಾತ–ಮೊಮ್ಮಗ ರಾಜಕೀಯವಾಗಿ ಬೇರೆಬೇರೆ ಅಭಿಪ್ರಾಯ ಹೊಂದಿದ್ದರೂ ಕುಟುಂಬ ಒಂದೇ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಾಮಾನ್ಯ. ಆದರೆ ಕ್ಷೇತ್ರದ ಅಭಿವೃದ್ಧಿ ಮುಖ್ಯ" ಎಂಬ ಮಾತುಗಳು ಕೂಡ ಸಾರ್ವಜನಿಕರ ನಡುವೆ ಕೇಳಿಬರುತ್ತಿವೆ.

news_1777804015_0_413.webp

ಒಟ್ಟಾರೆ, ಸಿಂಧನೂರು ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗುತ್ತದೆಯೇ? ಸಿಕ್ಕರೆ ಅದು ಹಂಪನಗೌಡ ಬಾದರ್ಲಿ ಅವರಿಗೆ ಸಿಗುತ್ತದೆಯೇ ಅಥವಾ ಬಸವನಗೌಡ ಬಾದರ್ಲಿ ಅವರಿಗೆ ಸಿಗುತ್ತದೆಯೇ? ಅಥವಾ ಇಬ್ಬರಿಗೂ ಸರ್ಕಾರದಲ್ಲಿ ಮಹತ್ವದ ಜವಾಬ್ದಾರಿ ದೊರೆಯುತ್ತದೆಯೇ? ಎಂಬ ಪ್ರಶ್ನೆಗಳು ಸದ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿಗೆ ಡಬಲ್ ಧಮಾಕಾ..? ಇಬ್ಬರು ಬಾದರ್ಲಿಗಳಿಗೆ ಸಚಿವ ಸ್ಥಾನ ಸಿಗುತ್ತಾ..?“ಸಿದ್ದರಾಮಯ್ಯ ವ್ಯಕ್ತಿ ಅಲ್ಲ… ಒಂದು ಶಕ್ತಿ”“ಸಿದ್ದು ಸರ್ಕಾರ ಪತನ..! ಇಂದಿನಿಂದ ಎಲ್ಲಾ ಸಚಿವರು ಮಾಜಿ ಸಚಿವರು”ಬುಕ್ಕನಟ್ಟಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಬಸವನಗೌಡ ಬಾದರ್ಲಿಗೆ ಸಚಿವ ಸ್ಥಾನ ಫಿಕ್ಸ್ ಆಗ್ತಿದೆಯಾ..?8 ವರ್ಷದ ಮಕ್ಕಳಿಗೆ ಮುಟ್ಟು..! ಬಾಲ್ಯ ಕಸಿದುಕೊಳ್ಳುತ್ತಿರುವ ಪಿಜ್ಜಾ-ಬರ್ಗರ್ ಸಂಸ್ಕೃತಿ..?ಅಕ್ರಮ ಗೋ ಸಾಗಾಟ ಹಾಗೂ ಗೋಹತ್ಯೆ ತಡೆಗೆ ಕ್ರಮ ಕೈಗೊಳ್ಳುವಂತೆ ಮನವಿಸರಕಾರಿ ನೌಕರಿ,ಸಂಬಳ ಬೇಕು ಆದರೆ ನಿಯಮ ಬೇಡವಾ...?ಪಿಸ್ತೂಲ್‌ನೊಂದಿಗೆ ಓಡಾಡುತ್ತಿರುವ ಉಪಲೋಕಾಯುಕ್ತ ಬಿ.ವೀರಪ್ಪ“ಕಾಕ್‌ರೋಚ್ ಜನತಾ ಪಾರ್ಟಿ” ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸಾಧನೆಹೃದಯಾಘಾತದ ಹಾವಳಿ! ಯುವಜನತೆ ಆತಂಕದಲ್ಲಿ!ವೈದ್ಯರ ಚೀಟಿ ಇಲ್ಲದೆ ಮಾತ್ರೆ ಮಾರಾಟ ಮಾಡಿದರೆ ಕಠಿಣ ಕ್ರಮಇಬ್ಬರ ಜಗಳ ಮೂರನೆಯವರಿಗೆ ಲಾಭ” ಗಾದೆ ಮಾತು ನಿಜವಾಗುತ್ತಾ..?ಸಿಂಧನೂರು ಪರಿಶಿಷ್ಟ ಜಾತಿ ಬಾಲಕರ ವಸತಿ ನಿಲಯದಲ್ಲಿ ಸಮಸ್ಯೆಗಳ ಆಗರ