ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಿಂಧನೂರಿನಲ್ಲಿ ಬೆಚ್ಚಿಬೀಳಿಸಿದ ಉದ್ಯಮಿಯ ಆತ್ಮಹತ್ಯೆ

“ಮೈ ತುಂಬಾ ಸಾಲವಾಗಿದೆ ಅಮ್ಮ…” ಎಂದ ಮಗ, ಮರುದಿನ ನೇಣಿಗೆ ಶರಣು

Advertisement

ಸಮರ್ಥ್ ಜ್ಯುವೆಲರ್ಸ್ ಮಾಲೀಕ ಪ್ರಾಣೇಶ್ ವರ್ಣೇಕರ್ ಆತ್ಮಹತ್ಯೆ – 8 ಪುಟಗಳ ಡೆತ್ ನೋಟ್ ಪತ್ತೆ

Advertisement

news_1778048979_0_441.webp

 

📍ಸಿಂಧನೂರು | ಮೇ 12 BB NEWS KANNADA 

ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದ ಆತ್ಮಹತ್ಯೆ ಪ್ರಕರಣವೊಂದು ಸ್ಥಳೀಯರನ್ನು ತೀವ್ರ ದುಃಖಕ್ಕೆ ದೂಡಿದೆ. ನಗರದ ಆದರ್ಶ ಕಾಲೋನಿಯಲ್ಲಿ ವಾಸವಿದ್ದ “ಸಮರ್ಥ್ ಜ್ಯುವೆಲರ್ಸ್” ಮಾಲೀಕರಾದ ಪ್ರಾಣೇಶ್ ವರ್ಣೇಕರ್ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆರ್ಥಿಕ ಸಂಕಷ್ಟ, ಕೋಟ್ಯಾಂತರ ಸಾಲ ಹಾಗೂ ವೈಯಕ್ತಿಕ ಜೀವನದ ಸಮಸ್ಯೆಗಳ ಒತ್ತಡದಿಂದ ಮನನೊಂದು ಈ ಕಠಿಣ ನಿರ್ಧಾರಕ್ಕೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

news_1778568496_1_712.webp

😢 “ನೀನು ಯಾವಾಗ ಬರ್ತೀಯ ಅಮ್ಮ…” – ತಾಯಿಯ ಕಣ್ಣೀರಿನ ಅಳಲು

ಮೃತ ಪ್ರಾಣೇಶ್ ವರ್ಣೇಕರ್ ಅವರು ತಮ್ಮ ತಾಯಿಯೊಂದಿಗೆ ವಾಸವಿದ್ದು, ಘಟನೆ ನಡೆದ ದಿನ ತಾಯಿ ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಆ ರಾತ್ರಿ ಮಗ ಪ್ರಾಣೇಶ್ ತಾಯಿಗೆ ಕರೆ ಮಾಡಿ,

 “ಅಮ್ಮಾ… ನೀನು ಯಾವಾಗ ಬರ್ತೀಯ?

ನನಗೆ ಮೈ ತುಂಬಾ ಸಾಲವಾಗಿದೆ…

ಸರಿಯಾಗಿ ನಿದ್ದೆ ಬರ್ತಾ ಇಲ್ಲ… ಊಟವೂ ಹೋಗ್ತಾ ಇಲ್ಲ…” ಎಂದು ಮನನೊಂದು ಮಾತನಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ತಾಯಿ, “ನಾಳೆ ಬರುತ್ತೇನೆ ಮಗನೇ… ಏನೂ ಆಗಲ್ಲ… ಆರಾಮಾಗಿರು…” ಎಂದು ಸಮಾಧಾನಪಡಿಸಿದ್ದರು. ಆದರೆ ತಾಯಿ ಮನೆಗೆ ಬರುವುದಕ್ಕೂ ಮುನ್ನವೇ ಮಗ ಸಾವಿಗೆ ಶರಣಾಗಿದ್ದಾನೆ. ಘಟನೆಯ ಬಳಿಕ ಕಣ್ಣೀರಿನಲ್ಲಿ ಮುಳುಗಿದ ತಾಯಿ,

 “ನಾನು ಏನು ಮಾಡಲಿ…?

ಇರುವ ಒಬ್ಬ ಮಗನನ್ನೇ ಕಳೆದುಕೊಂಡೆ…

ಈಗ ನಾನು ಹೇಗೆ ಬದುಕಲಿ…?” ಎಂದು ಅಳಲನ್ನು ತೋಡಿಕೊಂಡ ದೃಶ್ಯ ಸ್ಥಳದಲ್ಲಿದ್ದವರ ಕಣ್ಣೀರನ್ನು ತರಿಸಿತು.

news_1778568496_0_307.webp

🚪 ತೆರೆದ ಬಾಗಿಲೇ ಅನುಮಾನಕ್ಕೆ ಕಾರಣ

ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ಬಾಗಿಲು ಮುಚ್ಚಿಕೊಂಡೇ ಮಲಗುವ ಪ್ರದೇಶದಲ್ಲಿ, ಪ್ರಾಣೇಶ್ ಅವರ ಮನೆಯ ಬಾಗಿಲು ತೆರೆದಿರುವುದು ಸ್ಥಳೀಯರಲ್ಲಿ ಅನುಮಾನ ಹುಟ್ಟಿಸಿತು. ಒಳಗೆ ಹೋಗಿ ನೋಡಿದಾಗ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಾಣೇಶ್ ಅವರ ಮೃತದೇಹ ಪತ್ತೆಯಾಗಿದೆ.ಈ ದೃಶ್ಯ ಕಂಡು ಕುಟುಂಬಸ್ಥರು, ಸ್ನೇಹಿತರು ಹಾಗೂ ನೆರೆಹೊರೆಯವರು ಬೆಚ್ಚಿಬಿದ್ದಿದ್ದಾರೆ.

news_1778142080_0_556.webp

news_1777986246_0_709.webp

💰 “3 ಕೋಟಿಗೂ ಹೆಚ್ಚು ಸಾಲ” – ಆರ್ಥಿಕ ಸಂಕಷ್ಟದ ಒತ್ತಡ? ಸ್ಥಳೀಯರ ಮಾಹಿತಿಯ ಪ್ರಕಾರ, ಪ್ರಾಣೇಶ್ ವರ್ಣೇಕರ್ ಅವರು ಕಳೆದ ಹಲವು ವರ್ಷಗಳಿಂದ “ಸಮರ್ಥ್ ಜ್ಯುವೆಲರ್ಸ್” ಎಂಬ ಚಿನ್ನದ ಅಂಗಡಿ ನಡೆಸುತ್ತಿದ್ದರು. ಅದರ ಜೊತೆಗೆ ಲೇವಾದೇವಿ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದರು ಖಾಸಗಿ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಿದ್ದರು ಆದರೆ ಕೆಲವು ತಿಂಗಳುಗಳಿಂದ ಭಾರೀ ಆರ್ಥಿಕ ಸಂಕಷ್ಟ ಅವರನ್ನು ಕಾಡುತ್ತಿತ್ತು ಎನ್ನಲಾಗಿದೆ. ಅಂದಾಜು ₹3 ಕೋಟಿಗೂ ಅಧಿಕ ಸಾಲ ಮಾಡಿಕೊಂಡಿದ್ದರು ಎಂಬ ಮಾಹಿತಿ ಕೇಳಿಬರುತ್ತಿದ್ದು, ಸಾಲದ ಒತ್ತಡವೇ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

💔 ಕೌಟುಂಬಿಕ ಕಲಹವೂ ಕಾರಣವೇ? ಇತ್ತೀಚೆಗೆ ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ದೂರವಾಗಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ. ಒಂದೆಡೆ ಸಾಲದ ಕಾಟ… ಮತ್ತೊಂದೆಡೆ ವೈಯಕ್ತಿಕ ಬದುಕಿನ ನೋವು… ಈ ಎರಡೂ ಸಮಸ್ಯೆಗಳು ಅವರನ್ನು ಮಾನಸಿಕವಾಗಿ ಕುಗ್ಗಿಸಿರಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

📄 8 ಪುಟಗಳ ಡೆತ್ ನೋಟ್ ಪತ್ತೆ ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿರುವ ಸಂಗತಿ ಎಂದರೆ, ಆತ್ಮಹತ್ಯೆಗೆ ಮುನ್ನ ಪ್ರಾಣೇಶ್ ವರ್ಣೇಕರ್ ಅವರು ಸುಮಾರು 6 ರಿಂದ 8 ಪುಟಗಳ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

 

 

 

 

ಆ ಡೆತ್ ನೋಟ್‌ನಲ್ಲಿ

ಸಾಲ ಕೊಟ್ಟವರ ವಿವರಗಳಿವೆಯೇ..? ಯಾರಾದರೂ ಒತ್ತಡ ಹೇರಿದ್ದರೇ..? ಅಥವಾ ವೈಯಕ್ತಿಕ ಬದುಕಿನ ನೋವೇ ಹೆಚ್ಚಾಗಿತ್ತೇ..? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಆದರೆ ಡೆತ್ ನೋಟ್‌ನ ಸಂಪೂರ್ಣ ಮಾಹಿತಿ ಕುರಿತು ಪೊಲೀಸರು ಇನ್ನೂ ಅಧಿಕೃತವಾಗಿ ಏನನ್ನೂ ಬಹಿರಂಗಪಡಿಸಿಲ್ಲ.

news_1777542755_0_368.webp

 

👮 ಪೊಲೀಸ್ ತನಿಖೆ ಮುಂದುವರಿಕೆ

ಘಟನೆ ತಿಳಿಯುತ್ತಿದ್ದಂತೆ ಸಿಂಧನೂರು ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ. ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕು ಹಾಗೂ ಮೃತರ ತಾಯಿಗೆ ನ್ಯಾಯ ಸಿಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

⚠️ “ಸಾವೇ ಪರಿಹಾರವಲ್ಲ…” – ನಮ್ಮ ಮಾಧ್ಯಮದ ಕಳಕಳಿ

ಈ ಘಟನೆ ಎಲ್ಲರ ಮನಸ್ಸನ್ನೂ ನೋಯಿಸಿದೆ. ಸಾಲ, ಕುಟುಂಬದ ಸಮಸ್ಯೆ, ಮಾನಸಿಕ ಒತ್ತಡ – ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಸಾವೇ ಅಂತಿಮ ಪರಿಹಾರವಲ್ಲ. ಸಾಲ ಮಾಡಿದರೆ ಅದನ್ನು ತೀರಿಸುವ ದಾರಿ ಹುಡುಕಬೇಕು. ಸಮಸ್ಯೆ ಬಂದರೆ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಾಗ, ಅವನೊಂದಿಗೆ ಬದುಕುತ್ತಿದ್ದ ತಾಯಿ, ಕುಟುಂಬ, ಬಂಧುಗಳು ಜೀವನಪೂರ್ತಿ ನೋವಿನಲ್ಲಿ ಬದುಕಬೇಕಾಗುತ್ತದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.

👉 ದಯವಿಟ್ಟು ಯಾರೂ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಹೋಗಬೇಡಿ.

👉 ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇರುತ್ತದೆ.

👉 ಮನಸ್ಸಿನ ನೋವನ್ನು ಹಂಚಿಕೊಳ್ಳಿ… ಸಹಾಯ ಕೇಳಿ… ಬದುಕಿ.

“ಜೀವ ಅಮೂಲ್ಯ… ಸಾವಲ್ಲ, ಬದುಕೇ ಪರಿಹಾರ” ಎಂಬುದು ನಮ್ಮ ಮಾಧ್ಯಮದ ಕಳಕಳಿಯ ಮನವಿ.

 

🏥 ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೂ ಆಕ್ರೋಶ

“ಮರಣೋತ್ತರ ಪರೀಕ್ಷೆಗೆ ಬೇಕಾದ ಸಾಮಗ್ರಿಗಳೇ ಇಲ್ಲ” – ಆರೋಪ. ಪೊಲೀಸರು ಸಂಜೆ ವೇಳೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಆ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಇದಕ್ಕೆ ಕಾರಣವಾಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಅಗತ್ಯವಿರುವ: ಅಂಗಾಂಗ ಶೇಖರಣೆಗೆ ಬೇಕಾದ ಜಾರ್/ಬಾಕ್ಸ್ ವೈದ್ಯಕೀಯ ಬಟ್ಟೆಗಳು ಇತರೆ ಅಗತ್ಯ ಸಾಮಗ್ರಿಗಳು ಲಭ್ಯವಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರಂತೆ. ಆರೋಪದ ಪ್ರಕಾರ, ಇಂತಹ ಸಾಮಗ್ರಿಗಳು ಪ್ರತಿಯೊಂದು ಸರ್ಕಾರಿ ಆಸ್ಪತ್ರೆಯಲ್ಲೂ ಮುಂಚಿತವಾಗಿ ಶೇಖರಣೆ ಮಾಡಿ ಇರಬೇಕಾಗುತ್ತದೆ. ಆದರೆ ಇಲಾಖೆಯಿಂದ ಸರಬರಾಜಾಗಿಲ್ಲ ಎಂಬ ಉತ್ತರ ನೀಡಲಾಗಿದೆ ಎನ್ನಲಾಗಿದೆ.

news_1777804083.webp

⚠️ “ಹೊರಗಡೆ ಹೋಗಿ ತೆಗೆದುಕೊಂಡು ಬನ್ನಿ” ಎಂದಿದ್ದಾರಾ?

ಸ್ಥಳೀಯರು ಹೇಳುವಂತೆ, ಇದೇ ರೀತಿಯ ಘಟನೆಗಳು ಈ ಹಿಂದೆಯೂ ಎರಡು-ಮೂರು ಬಾರಿ ನಡೆದಿದ್ದು, ತುರ್ತು ಸಂದರ್ಭದಲ್ಲಿ.“ಅವಸರ ಮಾಡಿದರೆ ₹2,000 ರಿಂದ ₹3,000 ಖರ್ಚು ಮಾಡಿ ಹೊರಗಡೆಯಿಂದ ತೆಗೆದುಕೊಂಡು ಬನ್ನಿ”ಎಂದು ಹೇಳಲಾಗುತ್ತಿತ್ತು ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಇದರ ಜೊತೆಗೆ ರಾತ್ರಿ ಕರ್ತವ್ಯ ಮುಗಿಸಿಕೊಂಡ ವೈದ್ಯರು ತೆರಳಿದ ಬಳಿಕ, ಬೆಳಗ್ಗೆ ಕರ್ತವ್ಯದಲ್ಲಿದ್ದ ವೈದ್ಯರನ್ನು ಕೇಳಿದಾಗ. “ರಾತ್ರಿ ಯಾರಿದ್ದರೋ ಅವರೇ ಮಾಡಿಸಿಕೊಳ್ಳಿ… ಇದು ನನ್ನ ಕೆಲಸ ಅಲ್ಲ”ಎಂಬ ರೀತಿಯ ನಿರ್ಲಕ್ಷ್ಯದ ಉತ್ತರ ಸಿಕ್ಕಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.  “ಒಬ್ಬ ವ್ಯಕ್ತಿ ಸಾವನ್ನಪ್ಪಿದ ನಂತರವೂ ಕುಟುಂಬಸ್ಥರು ಆಸ್ಪತ್ರೆ ಸುತ್ತಾಡುವ ಪರಿಸ್ಥಿತಿ ಬರಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

news_1778568458_0_370.webp

📢 “ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಬೇಕು” – ಸಾರ್ವಜನಿಕರ ಒತ್ತಾಯ

ಮರಣೋತ್ತರ ಪರೀಕ್ಷೆಯಂತಹ ಅತ್ಯಂತ ಪ್ರಮುಖ ವೈದ್ಯಕೀಯ ಪ್ರಕ್ರಿಯೆಗೆ ಬೇಕಾದ ಸಾಮಗ್ರಿಗಳೇ ಇಲ್ಲದಿರುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಂದಿಸುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆ ಕುರಿತು ಗಂಭೀರವಾಗಿ ಗಮನಹರಿಸಿ:

✅ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸಾಮಗ್ರಿಗಳ ಲಭ್ಯತೆ ಖಚಿತಪಡಿಸಬೇಕು

✅ ರಾತ್ರಿ ವೇಳೆ ವೈದ್ಯಕೀಯ ಸೇವೆಗಳಲ್ಲಿ ನಿರ್ಲಕ್ಷ್ಯ ತಡೆಯಬೇಕು

✅ ಬಡ ಜನರಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕು

✅ ಆಸ್ಪತ್ರೆಗಳಲ್ಲಿ ಮಾನವೀಯತೆ ಮತ್ತು ಹೊಣೆಗಾರಿಕೆ ಹೆಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್