ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

 ಸಿಂಧನೂರಿನ ಯುವಕ ಕಾಣೆಯಾದ ಪ್ರಕರಣ: ಪೋಷಕರ ಕಣ್ಣೀರಿನ ಮನವಿ

“ಏಪ್ರಿಲ್ 14ರಿಂದ ಕಾಣೆಯಾದ ಬಿಎಸ್ಸಿ ವಿದ್ಯಾರ್ಥಿ – ಕುಟುಂಬಸ್ಥರ ಕಣ್ಣೀರಿನ ಮನವಿ”

Advertisement

ಸಿಂಧನೂರು, ಏಪ್ರಿಲ್ 30: BB NEWS KANNADA 

Advertisement

ತಾಲೂಕಿನ ಯುವಕನೊಬ್ಬ ಕಳೆದ ಏಪ್ರಿಲ್ 14ರಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಾಣೆಯಾದ ಯುವಕನನ್ನು ಸುರೇಶ್ (21) ಎಂದು ಗುರುತಿಸಲಾಗಿದೆ.

ಸುರೇಶ್ ಅವರು “ಧಾರವಾಡಕ್ಕೆ ಹೋಗುತ್ತೇನೆ” ಎಂದು ಹೇಳಿ ಸಿಂಧನೂರಿನಿಂದ ಹೊರಟಿದ್ದು, ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕೊನೆಯದಾಗಿ ಅವರು ಸಿಂಧನೂರು ತಾಲೂಕಿನ ಹುಡಾ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸುರೇಶ್ 21 ವರ್ಷ ಕಾಣೆಯಾಗಿರುವ ಯುವಕ
ಸುರೇಶ್ 21 ವರ್ಷ ಕಾಣೆಯಾಗಿರುವ ಯುವಕ

 

ಸುರೇಶ್ ಅವರು ಬಿಎಸ್ಸಿ (2ನೇ ವರ್ಷ) ವಿದ್ಯಾರ್ಥಿಯಾಗಿದ್ದು, ಸುಮಾರು 5.5 ಅಡಿ ಎತ್ತರ, ಸ್ವಲ್ಪ ಕಪ್ಪು ಮೈಬಣ್ಣ ಹೊಂದಿದ್ದಾರೆ. ಕಾಣೆಯಾದ ವೇಳೆ ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದರು. ವಿಶೇಷ ಗುರುತು ಎಂದರೆ ಬಲಗಣ್ಣಿನ ಬಳಿ ಸ್ವಲ್ಪ ಕಪ್ಪು ಗುರುತು ಇರುವುದಾಗಿದೆ.

ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

news_1777542755_0_368.webp

🟦 ಪೋಷಕರ ಕಣ್ಣೀರಿನ ಮನವಿ:

ಕಾಣೆಯಾದ ಸುರೇಶ್ ಅವರ ತಂದೆ ಶರಣಪ್ಪ ಹುನಗುಂದ ಮತ್ತು ತಾಯಿ ಬಸಮ್ಮ ಹುನಗುಂದ ಭಾವನಾತ್ಮಕವಾಗಿ ಮನವಿ ಮಾಡಿಕೊಂಡಿದ್ದಾರೆ:

“ಮಗನೆ, ನೀನು ಎಲ್ಲೇ ಇದ್ದರೂ ದಯವಿಟ್ಟು ಮನೆಗೆ ಮರಳಿ ಬಾ. ನಿನ್ನನ್ನು ಬಿಟ್ಟು ನಾವು ಇರಲು ಸಾಧ್ಯವಾಗುತ್ತಿಲ್ಲ. ಒಂದು ವಾರದಿಂದ ಊಟ-ನೀರು ಬಿಟ್ಟು ಆರೋಗ್ಯ ಕಳೆದುಕೊಂಡಿದ್ದೇವೆ. ನಿನಗೆ ಏನೇ ಸಮಸ್ಯೆ ಇದ್ದರೂ ನಾವು ಪರಿಹರಿಸುತ್ತೇವೆ. ಕೈ ಮುಗಿದು ಕೇಳುತ್ತೇವೆ, ದಯವಿಟ್ಟು ಬೇಗ ಮನೆಗೆ ಬಾ” ಎಂದು ಕಣ್ಣೀರಿನಿಂದ ಮನವಿ ಮಾಡಿದ್ದಾರೆ.

 

🟩 ಮಾಹಿತಿ ನೀಡಲು ಮನವಿ:

ಯುವಕನ ಬಗ್ಗೆ ಯಾವುದೇ ಸುಳಿವು ದೊರೆತಲ್ಲಿ, ದಯವಿಟ್ಟು ಕೆಳಗಿನ ಸಂಖ್ಯೆಗಳ ಮೂಲಕ ಸಂಪರ್ಕಿಸಲು ವಿನಂತಿಸಲಾಗಿದೆ:

📞 ಶರಣಪ್ಪ: 8152039312

📞 ನಾಗರಾಜ್: 7760652735

📞 ವಿಜಯಕುಮಾರ: 9845945328

📞 ಬಡವರ ಬಾರಕೋಲು ಪತ್ರಿಕಾ ಕಚೇರಿ: 9535111986

ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ

👉 ಸೂಚನೆ:

ಈ ಯುವಕನ ಪತ್ತೆಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್