ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಡಾ. ಸಿದ್ದರಾಮೇಶ್ವರ ಶರಣರಿಗೆ ‘ಶರಣ ಸಂಕುಲ ಸೂರ್ಯ’ ಪ್ರಶಸ್ತಿ ಪ್ರದಾನ

Advertisement
ಸಿಂಧನೂರು:23 BB NEWS KANNADA
ಸಿಂಧನೂರು ತಾಲೂಕಿನ ಶ್ರೀ ವೆಂಕಟಗಿರಿ ಕ್ಯಾಂಪ್ದಲ್ಲಿರುವ ಸಿದ್ದಾಶ್ರಮದ ಒಡೆಯರಾದ ಶ್ರೀ ಡಾ. ಸಿದ್ದರಾಮೇಶ್ವರ ಶರಣರಿಗೆ ‘ಶರಣ ಸಂಕುಲ ಸೂರ್ಯ’ ಪ್ರಶಸ್ತಿಯನ್ನು ಭಾನುವಾರ (ದಿನಾಂಕ 23-02-2026) ವಿಜೃಂಭಣೆಯಿಂದ ಪ್ರದಾನ ಮಾಡಲಾಯಿತು.


ಶ್ರೀ ದಾನಮ್ಮದೇವಿ ಪುರಾಣ ಪ್ರವಚನ ಹಾಗೂ ಶ್ರೀ ಭದ್ರಕಾಳಿ–ವೀರಭದ್ರೇಶ್ವರ ಸಾಮೂಹಿಕ ತುಲಾಭಾರ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭದಲ್ಲಿ, ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು (ಶ್ರೀಶೈಲ–ಯಡೂರ ಮಠ) ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಮಾತನಾಡಿದ ಮಹಾಸ್ವಾಮಿಗಳು,
“ಡಾ. ಸಿದ್ದರಾಮೇಶ್ವರ ಶರಣರು ಶರಣ ಸಂಸ್ಕೃತಿ, ಸಾಮಾಜಿಕ ಸೇವೆ, ಧಾರ್ಮಿಕ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ ಶರಣ ಸಂಕುಲ ಸೂರ್ಯ ಪ್ರಶಸ್ತಿ ನೀಡಲಾಗಿದೆ” ಎಂದು ಹೇಳಿದರು.


ಡಾ. ಸಿದ್ದರಾಮೇಶ್ವರ ಶರಣರು ಮಾತನಾಡಿ,
“ಈ ಪ್ರಶಸ್ತಿ ನನ್ನ ವ್ಯಕ್ತಿಗತ ಸಾಧನೆಯಲ್ಲ, ಇದು ಶರಣ ಸಂಪ್ರದಾಯದ ಮೌಲ್ಯಗಳು ಮತ್ತು ಸಿದ್ದಾಶ್ರಮದ ಸೇವಾ ಪರಂಪರೆಯ ಗೌರವ. ಮುಂದಿನ ದಿನಗಳಲ್ಲೂ ಸಮಾಜ ಸೇವೆ, ಧಾರ್ಮಿಕ ಜಾಗೃತಿ ಮತ್ತು ಶರಣ ತತ್ವಗಳ ಪ್ರಸಾರಕ್ಕೆ ಇನ್ನಷ್ಟು ಶ್ರಮಿಸುತ್ತೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಾನಮ್ಮದೇವಿ ಪುರಾಣ ಪ್ರವಚನ, ಭದ್ರಕಾಳಿ–ವೀರಭದ್ರೇಶ್ವರ ದೇವರಿಗೆ ಸಾಮೂಹಿಕ ತುಲಾಭಾರ, ಭಕ್ತಾದಿಗಳ ಪಾಲ್ಗೊಳ್ಳುವಿಕೆ ಹಾಗೂ ಧಾರ್ಮಿಕ ಆಚರಣೆಗಳು ವಿಜೃಂಭಣೆಯಿಂದ ನಡೆದವು.

ಈ ಒಂದು ಕಾರ್ಯಕ್ರಮದಲ್ಲಿ ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರೀಶೈಲ-ಯಡೂರ, ಶ್ರೀ ಮ.ನಿ.ಪ್ರ. ಶ್ರದ್ಧಾನಂದ ಸ್ವಾಮಿಗಳು ಗೀತಾಶ್ರಮ ಸದಲಗಾ, ಶ್ರೀ ಬಸವೇಶ್ವರ ಸ್ವಾಮಿಗಳು ಗುರುದೇವಾಶ್ರಮ ಐನಾಪೂರ-ಕೃಷ್ಣಾಕಿತ್ತೂರ, ಶ್ರೀ ವೇ.ಮೂ.ಪಂ.ಅನ್ನದಾನ ಶಾಸ್ತ್ರಿಗಳು ಗುಡೂರ-ಇಲಕಲ್ಲ, ಶ್ರೀ ಡಾ. ಸಿದ್ಧರಾಮೇಶ್ವರ ಶರಣರು ಶ್ರೀ ಸಿದ್ಧಾಶ್ರಮ ವೆಂಕಟಗಿರಿ ಕ್ಯಾಂಪ್, ರವುಡಕುಂದಿ ಶ್ರೀ ಡಾ|| ಮಹಾಂತೇಶ ಆರಾದ್ರಿಮಠ ನಿರ್ದೇಶಕರು, ಮುಜರಾಯಿ ಇಲಾಖೆ ಅ.ನಿ. ಶ್ರೀ ಪವನಕುಮಾರ ಶಾಸ್ತ್ರಿಗಳು ಶ್ರೀ. ಹಿರೇಮಠ ಬೆಳಗಾವಿ ,ಶ್ರೀ ಮಲ್ಲಯ್ಯಾ ಗು. ಹಿರೇಮಠ ಗೋಕಾಕ, ಶ್ರೀ ರಮೇಶ ಗು. ಮೂರ್ತಲೆ ಗೋಕಾಕ, ಶ್ರೀ ಭೀಮನಗೌಡ ರು. ಪೋಲಿಸ್ ಪಾಟೀಲ ಬೆಂಗಳೂರು, ಶ್ರೀಮತಿ ಮಹಾದೇವಿ ಶ್ರೀ. ಖ್ಯಾಡಿ ಅಥಣಿ, ಶ್ರೀ ಗಂಗಾರೆಡ್ಡಿ ಬನ್ನಿಮರ ಬೆಂಗಳೂರು, ಶ್ರೀ ಸೋಮನಾಥ ಗವನಾಳೆ ಪದ್ಮಾ ಪಂಡಾಲ, ಚಿಕ್ಕೋಡಿ, ಶ್ರೀ ಮಲ್ಲಿಕಾರ್ಜುನ ದಡ್ಡಿಕರ ಕಿರಾಣಾ ವರ್ತಕರು, ಯಕ್ಸಂಬಾ, ಶ್ರೀ ಬಸಪ್ಪಾ ಅ. ಕೋಕಣೆ ನಿರ್ದೇಶಕರು, ಆರ್.ಡಿ.ಎಸ್..ಶಿಕ್ಷಣ ಸಂಸ್ಥೆ, ಮಾಂಜರಿ, ಶ್ರೀ ದುರ್ಯೋಧನ ಭಾ. ವಸವಾಡೆ ಅಧ್ಯಕ್ಷರು, ಶಾಂತಿಸಾಗರ ಕೆ.ಸೌ.ಸ.ಸಂಘ., ಮಾಂಜರಿ , ಡಾ|| ಶಾಮ ಎಸ್. ಪಾಟೀಲ ಖ್ಯಾತ ವೈದ್ಯರು, ಮಾಂಜರಿ, ಶ್ರೀ ಸದಾನಂದ ಶರಣರು ಶ್ರೀ ಸಿದ್ಧಾಶ್ರಮ ವೆಂಕಟಗಿರಿ ಕ್ಯಾಂಪ್, ರವುಡಕುಂದಿ, ಶ್ರೀ ರುದ್ರಪ್ಪ ಗಂಗಪ್ಪ ಹಾಳಮನಿ ಅಸುಂಡಿ, ಶ್ರೀ ಸಂಜಯ ಹಂದೆ ಸಂಕೇಶ್ವರ, ಶ್ರೀ ಚಂದ್ರಕಾಂತ ಶಿ. ಸುಣದಾಳೆ ಸಂಕೇಶ್ವರ, ಶ್ರೀ ಸಂತೋಷ ರಾ. ಮಗದುಮ್ಮ ಸಂಕೇಶ್ವರ, ಶ್ರೀ ಸುಧೀರ ದುಂ. ಗಡ್ಡಿ ಸಂಕೇಶ್ವರ, ಶ್ರೀ ಶ್ರೀಶೈಲ ಪ. ಖಟಕಬಾವಿ ಗೊಲಬಾವಿ ಹಾಗೂ ನಾಡಿನ ವಿವಿಧ ಭಾಗಗಳಿಂದ ಭಕ್ತರು, ಮಠಾಧೀಶರು, ಗಣ್ಯರು, ಶರಣ ಸಂಕುಲದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್